JDS-BJP Alliance; ಜೆಡಿಎಸ್‌ಗೆ 3 ಕ್ಷೇತ್ರ ಫಿಕ್ಸ್; ಸುಮಲತಾಗೆ ನಿರಾಸೆ ಗ್ಯಾರೆಂಟಿ!
ಬೆಂಗಳೂರು; ಲೋಕಸಭಾ ಚುನಾವಣೆ ಇನ್ನೇನು ಎರಡು ತಿಂಗಳಲ್ಲಿ ಬರಲಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಆದ್ರೆ ಇದರಲ್ಲಿ 3 ಕ್ಷೇತ್ರಗಳನ್ನು ಕೊಡೋದಕ್ಕೆ ಬಿಜೆಪಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮಾಜಿ ಸಿಎಂ ಕುಮಾರಸ್ವಾಮಿಯವರು ದಿಢೀರ್ ಅಂತ ದೆಹಲಿ ಪ್ರಯಾಣ ಮಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಮೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಕನ್ಫರ್ಮ್ ಮಾಡಲಾಗಿದೆ.
ಯಾವುವು ಆ ಮೂರು ಕ್ಷೇತ್ರಗಳು..?;
ಯಾವುವು ಆ ಮೂರು ಕ್ಷೇತ್ರಗಳು..?; ಜೆಡಿಎಸ್ ಪಕ್ಷ ಹಾಸನ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಕೇಳುತ್ತಿದೆ. ಆದ್ರೆ ಇದರಲ್ಲಿ ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಕ್ಕೆ ಬಿಜೆಪಿ ನಾಯಕರು ಕನ್ಫರ್ಮ್ ಮಾಡಿದ್ದಾರೆ. ಇಂದು ಕುಮಾರಸ್ವಾಮಿಯವರು ಅಮಿತ್ ಶಾ ನಡೆಸಿದ ಮಾತುಕತೆ ವೇಳೆ ಇದನ್ನು ಅಂತಿಮ ಮಾಡಲಾಗಿದೆ ಎಂದು ತಿಳಿದುಬಂದಿದೆ. ಉಳಿದಂತೆ ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಬಗ್ಗೆ ಮುಂದೆ ಯೋಚನೆ ಮಾಡೋಣ ಎಂದು ಅಮಿತ್ ಶಾ ತಿಳಿಸಿದ್ದಾರೆ ಎನ್ನಲಾಗಿದೆ.
20 ನಿಮಿಷಗಳ ಮಾತುಕತೆಯಲ್ಲಿ ನಡೆದಿದ್ದೇನು..?;
20 ನಿಮಿಷಗಳ ಮಾತುಕತೆಯಲ್ಲಿ ನಡೆದಿದ್ದೇನು..?; ಮಾಜಿ ಸಿಎಂ ಕುಮಾರಸ್ವಾಮಿಯವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಜೊತೆ ದಿಢೀರ್ ಅಂತ ದೆಹಲಿಗೆ ತೆರಳಿದ್ದರು.. ಈ ವೇಳೆ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೆಟಿಯಾಗಿ ಮಾತುಕತೆ ನಡೆಸಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಇಬ್ಬರು ನಾಯಕರೂ ಚರ್ಚೆ ಮಾಡಿದ್ದಾರೆ. ಸೀಟು ಹಂಚಿಕೆ ವಿಚಾರವಾಗಿಯೇ ಚರ್ಚೆಯಾಗಿದ್ದು, ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಕ್ಕೆ ನಿಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಕೊಂಡು, ಸಂಘಟನೆ ಶುರು ಮಾಡಿಕೊಳ್ಳಿ, ಉಳಿದ ಕ್ಷೇತ್ರಗಳ ಬಗ್ಗೆ ಸ್ವಲ್ಪ ದಿನ ಆದ ಮೇಲೆ ನೋಡೋಣ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಸ್ಥಳೀಯ ಮುಖಂಡರ ಬಗ್ಗೆ ದೂರು;
ಬಿಜೆಪಿ ಸ್ಥಳೀಯ ಮುಖಂಡರ ಬಗ್ಗೆ ದೂರು; ಹಾಸನ ಹಾಗೂ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸಾಕಷ್ಟು ಪ್ರಾಬಲ್ಯವಿದೆ. ಗೆಲ್ಲುವ ಶಕ್ತಿ ಇದೆ.. ಆದ್ರೆ ಈ ಕ್ಷೇತ್ರಗಳ ಬಿಜೆಪಿ ಮುಖಂಡರು ಅಪಸ್ವರ ಎತ್ತುತ್ತಿದ್ದಾರೆ. ಹಾಸನ ಹಾಗೂ ಮಂಡ್ಯ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂದು ಕೆಲವರು ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಕೆಲ ಬಿಜೆಪಿ ಮುಖಂಡರು ಮಂಡ್ಯ ಜಿಲ್ಲೆಯಲ್ಲಿ ಸಭೆ ನಡೆಸಿದ್ದರು. ಈ ವೇಳೆ ಸುಮಲತಾ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಲಾಗಿತ್ತು. ಈ ಹಿನ್ನೆಯಲ್ಲಿ ಬಿಜೆಪಿ ಸ್ಥಳೀಯ ಮುಖಂಡರು ಅಪಸ್ವರ ಎತ್ತಿದರೆ ಒಗ್ಗಟ್ಟು ಇಲ್ಲದಂತಾಗುತ್ತದೆ. ನಾವು ಕಾಂಗ್ರೆಸ್ ಪಕ್ಷವನ್ನು ಸೋಲಿಸೋದಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿರೋದು. ಹೀಗಾಗಿ, ಎರಡೂ ಕ್ಷೇತ್ರಗಳಲ್ಲಿನ ಬಿಜೆಪಿ ಮುಖಂಡರ ಬಾಯಿ ಮುಚ್ಚಿಸಿ ಎಂದು ಕುಮಾರಸ್ವಾಮಿಯವರು ಅಮಿತ್ ಶಾಗೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಸುಮಲತಾ ಅವರು ಏನು ಮಾಡುತ್ತಾರೆ..?;
ಸುಮಲತಾ ಅವರು ಏನು ಮಾಡುತ್ತಾರೆ..?; ಮಂಡ್ಯ ಸಂಸದೆ ಸುಮಲತಾ ಅವರು ಮಂಡ್ಯದಿಂದ ಬಿಜೆಪಿ ಟಿಕೆಟ್ ಬಯಸಿದ್ದರು.. ಅದಕ್ಕಾಗಿ ಅವರು ಹೈಕಮಾಂಡ್ ನಾಯಕರನ್ನೆಲ್ಲಾ ಭೇಟಿಯಾಗಿ ಬಂದಿದ್ದರು.. ಆದರೂ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಇತ್ತ ಸುಮಲತಾ ಅವರು ಮಂಡ್ಯ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗೋದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಅವರ ನಡೆ ಬಗ್ಗೆ ಕುತೂಹಲ ಕೆರಳಿಸಿದೆ. ಸುಮಲತಾ ಅವರು ಈ ಬಾರಿಯೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರಾ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರಾ ಎಂಬುದರ ಬಗ್ಗೆ ಕುತೂಹಲ ಶುರುವಾಗಿದೆ.
ಮೈಸೂರು ಭೇಟಿ ನಂತರ ಅಮಿತ್ ಶಾ ತೀರ್ಮಾನ;
ಮೈಸೂರು ಭೇಟಿ ನಂತರ ಅಮಿತ್ ಶಾ ತೀರ್ಮಾನ; ಅಮಿತ್ ಶಾ ಅವರು ಕೆಲ ದಿನಗಳ ಹಿಂದೆ ಮೈಸೂರಿಗೆ ಭೇಟಿ ನೀಡಿದ್ದರು.. ಈ ವೇಳೆ ರಾಜ್ಯದ ಬಿಜೆಪಿ ನಾಯಕರ ಜೊತೆ ಸಭೆ ನಡೆಸಿದ್ದರು.. ಈ ಸಭೆಯಲ್ಲಿ ಮಂಡ್ಯ ಕ್ಷೇತ್ರದ ಬಗ್ಗೆ ಚರ್ಚೆಯಾಗಿತ್ತು.. ಸುಮಲತಾ ಅವರಿಗೆ ಟಿಕೆಟ್ ಕೊಟ್ಟರೆ ಹೇಗೆ ಎಂಬುದರ ಬಗ್ಗೆ ಚರ್ಚೆಯಾಗಿತ್ತು.. ಕೊನೆಗೆ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ.