Politics

Poster War; ಉದ್ಯೋಗ ಮೇಳದ ನಾಟಕ, `Show’cialist ಸಿಎಂ; ಏನಿದು ಪೋಸ್ಟರ್‌ ವಾರ್‌..?

ಬೆಂಗಳೂರು; ಲೋಕಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಈ ಸಂದರ್ಭದಲ್ಲಿ ಕೆಸರೆರಚಾಟು ಜೋರಾಗಿದೆ. ಆಗಲೇ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜೋರು ಪೋಸ್ಟರ್‌ ವಾರ್‌ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳನ್ನು ಹರಿಬಿಟ್ಟು, ಇಬ್ಬರಿಗೊಬ್ಬರು ಸಮರ ಶುರು ಮಾಡಿದ್ದಾರೆ.

ಇದನ್ನೂ ಓದಿ; Congress Clash; ಕೋಲಾರದಲ್ಲಿ ಕೊತ್ತೂರು-ಕೆ.ಹೆಚ್‌.ಮುನಿಯಪ್ಪ ಬೆಂಬಲಿಗರ ಜಟಾಪಟಿ!

 

ಮಾತುಕೊಟ್ಟ 20 ಕೋಟಿ ಉದ್ಯೋಗ ಎಲ್ಲಿ..?

ಮಾತುಕೊಟ್ಟ 20 ಕೋಟಿ ಉದ್ಯೋಗ ಎಲ್ಲಿ..?;   2014ರಲ್ಲಿ ಮೊದಲ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿ ಪ್ರಧಾನಿ ನರೇಂದ್ರ ಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡೋದಾಗಿ ಹೇಳಿದ್ದರು. ಆದ್ರೆ ಅದು ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್‌ ಲೇವಡಿ ಮಾಡಲು ಶುರು ಮಾಡಿದೆ. ಇಂದು ಕಾಂಗ್ರೆಸ್‌ ಕಾರ್ಯಕರ್ತರು ಮೋದಿ ವಿರುದ್ಧ ಪೋಸ್ಟರ್‌ ಒಂದರನ್ನು ಹರಿಬಿಟ್ಟಿದ್ದರು. ಮಾತುಕೊಟ್ಟ 20 ಕೋಟಿ ಉದ್ಯೋಗ ಎಲ್ಲಿ..? ಉದ್ಯೋಗ ಮೇಳದ ನಾಟಕ ಸಾಕು; ವಷ್ಟಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಎಲ್ಲಿ..? ಎಂದು ಪೋಸ್ಟರ್‌ನಲ್ಲಿ ಪ್ರಶ್ನೆ ಮಾಡಿದ್ದರು.

ಈ ಪೋಸ್ಟರ್‌ಗಳು ಎಲ್ಲೆಡೆ ವೈರಲ್‌ ಆಗಿವೆ. ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಕೂಡಾ ಸಾಕಷ್ಟು ಷೇರ್‌ ಮಾಡಲಾಗುತ್ತಿದೆ. ಇದನ್ನು ನೋಡಿ ಬಿಜೆಪಿ ಕಾರ್ಯಕರ್ತರು ಕೂಡಾ ರೊಚ್ಚಿಗೆದ್ದಿದ್ದಾರೆ. ಅವರೂ ಕೂಡಾ ಪೋಸ್ಟರ್‌ ವಾರ್‌ ನಡೆಸಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರಿಗೆ ಪ್ರತಿಯಾಗಿ ಬಿಜೆಪಿಯಿಂದಲೂ ಪೋಸ್ಟರ್‌ ತಯಾರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಇದನ್ನೂ ಓದಿ; Ashok chavan; ಅಧಿಕೃತವಾಗಿ ಬಿಜೆಪಿ ಸೇರಿದ ಮಹಾ ಮಾಜಿ ಸಿಎಂ ಅಶೋಕ್‌ ಚವಾಣ್‌!

ʻShowʼcialist ಸಿಎಂ ಎಂದು ಬಿಜೆಪಿಗರು;

ʻShowʼcialist ಸಿಎಂ ಎಂದು ಬಿಜೆಪಿಗರು; ಯಾವಾಗ ಕಾಂಗ್ರೆಸ್‌ ಕಾರ್ಯಕರ್ತರು ಉದ್ಯೋಗ ಕೇಳಿದರೋ, ಬಿಜೆಪಿ ಕಾರ್ಯಕರ್ತರು ಸಮಾಜವಾದಿ ಎಂದು ಹೇಳಿಕೊಂಡು ಸಿಎಂ ಸಿದ್ದರಾಮಯ್ಯ ಮಜಾವಾದಿಯಾಗಿದ್ದಾರೆ ಎಂದು ಪೋಸ್ಟರ್‌ ಮಾಡಿ ಹರಿಬಿಟ್ಟಿದ್ದಾರೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಈ ಫೋಟೋ ಬಳಸಿಕೊಂಡಿರುವ ಬಿಜೆಪಿ ಕಾರ್ಯಕರ್ತರು, ಸಮಾಜವಾದಿಯ ಮಜವಾದ, ʻShowʼcialist ಸಿಎಂ, ನಲವತ್ತು ಲಕ್ಷದ ಪ್ರಯಾಣ ಎಂದು ಮೂದಲಿಸಿದ್ದಾರೆ. ಎರಡೂ ಪೋಸ್ಟರ್‌ಗಳು ಸಾಕಷ್ಟು ವೈರಲ್‌ ಆಗುತ್ತಿವೆ.

ವಿಧಾನಸಭಾ ಚುನಾವಣೆಯಲ್ಲಿ PayCM ಅಭಿಯಾನ;

ವಿಧಾನಸಭಾ ಚುನಾವಣೆಯಲ್ಲಿ PayCM ಅಭಿಯಾನ; ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ PayCM ಅಭಿಯಾನ ಶುರು ಮಾಡಲಾಗಿತ್ತು. ಆಗಿನ ಸಿಎಂ ಬಸವರಾಜ ಬೊಮ್ಮಾಯಿ ನಲವತ್ತು ಪರ್ಸೆಂಟ್‌ ಕಮೀಷನ್‌ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪೋಸ್ಟರ್‌ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿತ್ತು. ಅಂದಿನಿಂದ ಶುರುವಾದ ಪೋಸ್ಟರ್‌ ಅಭಿಯಾನ ಈಗಲೂ ಮುಂದುವರೆಯುತ್ತಿದೆ.

ಇದನ್ನೂ ಓದಿ; Mandya Loksabha; ಮಂಡ್ಯ ಲೋಕಸಭೆಯಲ್ಲಿ ಅಖಾಡಕ್ಕಿಳಿಯೋರು ಯಾರು..?; ಹೆಚ್ಡಿಕೆ ಫಿಕ್ಸಾ..?

 

 

Share Post