NationalPolitics

Ashok chavan; ಅಧಿಕೃತವಾಗಿ ಬಿಜೆಪಿ ಸೇರಿದ ಮಹಾ ಮಾಜಿ ಸಿಎಂ ಅಶೋಕ್‌ ಚವಾಣ್‌!

ಮುಂಬೈ; ನಿನ್ನೆಯಷ್ಟೇ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಕೊಟ್ಟಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್‌ ಚವಾಣ್‌ ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂಬೈನ ಬಿಜೆಪಿ ಕಚೇರಿಯಲ್ಲಿ ಅಶೋಕ್‌ ಚವಾಣ್‌ ಬಿಜೆಪಿ ಬಾವುಟ ಹಿಡಿದಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಮಾಜಿ ಎಂಎಲ್‌ಸಿ ಅಮರ್‌ ರಾಜುರ್ಕರ್‌ ಕೂಡಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇನ್ನೂ ಒಂದಷ್ಟು ಕಾಂಗ್ರೆಸ್‌ ನಾಯಕರು ಬಿಜೆಪಿ ಸೇರೋದು ಪಕ್ಕಾ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; Rich Beggar; ಈಕೆ ಭಿಕ್ಷುಕಿ, ಆದ್ರೆ ಸಂಪಾದನೆ ಲಕ್ಷಗಳಲ್ಲಿ.. ಆಸ್ತಿ ಕೇಳಿದರೆ ದಂಗಾಗ್ತೀರಿ..!

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ;

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ; ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ನೇತೃತ್ವದಲ್ಲಿ ಅಶೋಕ್‌ ಚವಾಣ್‌ ಹಾಗೂ ಅಮರ್‌ ರಾಜುರ್ಕರ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತವಾಗಿದೆ. ಲೋಕಸಭಾ ಚುನಾವಣೆ ಹೊಸ್ತಿಯಲ್ಲಿ ದೊಡ್ಡ ನಾಯಕನನ್ನೇ ಬಿಜೆಪಿ ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ. ಅಶೋಕ್‌ ಅವರ ಜೊತೆಯಲ್ಲೇ ಇನ್ನೂ ಹಲವು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬರೋದಕ್ಕೆ ಸಿದ್ಧವಾಗಿದ್ದಾರೆ. ಇದರಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ, ಮಹಾರಾಷ್ಟ್ರದಲ್ಲಿ ಅಭ್ಯರ್ಥಿಗಳನ್ನು ಹಾಕೋದಕ್ಕೂ ಪರದಾಡಬೇಕಾದ ಪರಿಸ್ಥಿತಿ ಬರಬಹುದು.

ಮೋದಿಯವರ ಕೈಬಲಪಡಿಸಲು ಬಿಜೆಪಿ ಸೇರ್ಪಡೆ!;

ಮೋದಿಯವರ ಕೈಬಲಪಡಿಸಲು ಬಿಜೆಪಿ ಸೇರ್ಪಡೆ!; ಅಶೋಕ್‌ ಚವಾಣ್‌ ಅವರನ್ನು ಬಿಜೆಪಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡುತ್ತದೆ ಎಂದು ಹೇಳಲಾಗಿತ್ತು. ಆದ್ರೆ ಇದಕ್ಕೆ ಅಶೋಕ್‌ ಚವಾಣ್‌ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ನಾವು ಯಾವುದೇ ಅಧಿಕಾರ ಕೇಳಿಕೊಂಡು ಬಿಜೆಪಿಗೆ ಬಂದಿಲ್ಲ. ನಾನು 38 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಮೋದಿಯವರ ಅಭಿವೃದ್ಧಿಯ ಕೆಲಸದಲ್ಲಿ ನಾನು ಭಾಗಿಯಾಗುತ್ತೇನೆ. ಮೋದಿಯವರ ಕೈ ಬಲಪಡಿಸಲು ನಾನು ಬಂದಿದ್ದೇನೆ. ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ. ಯಾವುದೇ ಷರತ್ತು ಇಲ್ಲದೆ ನಾನು ಬಿಜೆಪಿಗೆ ಸೇರಿದ್ದೇನೆ ಎಂದು ಅಶೋಕ್‌ ಚವಾಣ್‌ ಹೇಳಿದ್ದಾರೆ.

ಇದನ್ನೂ ಓದಿ; Congress Clash; ಕೋಲಾರದಲ್ಲಿ ಕೊತ್ತೂರು-ಕೆ.ಹೆಚ್‌.ಮುನಿಯಪ್ಪ ಬೆಂಬಲಿಗರ ಜಟಾಪಟಿ!

ಈಗಾಗಲೇ ಇಬ್ಬರು ನಾಯಕರನ್ನು ಕಳೆದುಕೊಂಡಿದ್ದ ಕಾಂಗ್ರೆಸ್‌;

ಈಗಾಗಲೇ ಇಬ್ಬರು ನಾಯಕರನ್ನು ಕಳೆದುಕೊಂಡಿದ್ದ ಕಾಂಗ್ರೆಸ್‌; ಕಾಂಗ್ರೆಸ್‌ ಪಕ್ಷ ಈಗಾಗಲೇ ಇಬ್ಬರು ಪ್ರಮುಖ ನಾಯಕರನ್ನು ಕಳೆದುಕೊಂಡಿತ್ತು. ಪ್ರಭಾವಿ ನಾಯಕರಾದ ಮಿಲಿಂದ್ ದಿಯೋರಾ, ಬಾಬಾ ಸಿದ್ದಿಕ್ ಅವರು ಪಕ್ಷ ಬಿಟ್ಟಿದ್ದರು. ಮಿಲಿಂದ್ ದಿಯೋರಾ ಏಕನಾಥ್ ಶಿಂಧೆ ಶಿವಸೇನಾಗೆ ಮತ್ತು ಬಾಬಾ ಸಿದ್ದಿಕ್ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರಿದ್ದರು. ಈ ಬೆನ್ನಲ್ಲೇ ಅಶೋಕ್‌ ಚವಾಣ್‌ ಅವರು ಬಿಜೆಪಿಗೆ ಸೇರಿದ್ದಾರೆ. ಇದೇ ವೇಳೆ ಮಾತನಾಡಿರುವ ಬಾಬಾ ಸಿದ್ಧಿಕ್‌ ಇದು ಕಾಂಗ್ರೆಸ್‌ ಎಚ್ಚರಿಕೆ ಗಂಟೆಯಾಗಿದೆ ಎಂದು ಹೇಳಿದ್ದಾರೆ.

Share Post