Health

Raagi benefits; ರಾಗಿಯನ್ನು ಇಷ್ಟೆಲ್ಲಾ ರೀತಿಯಲ್ಲಿ ಬಳಸಬಹುದಾ..?, ರಾಗಿ ನಿಮ್ಮ ಆರೋಗ್ಯದ ಸಿರಿ..!

ಬೆಂಗಳೂರು; ರಾಗಿ ತಿಂದವರು ಹೆಚ್ಚು ಗಟ್ಟಿಯಾಗಿರುತ್ತಾರೆ. ಹೆಚ್ಚು ಕಾಲ ಬದುಕುತ್ತಾರೆ ಎಂದು ಎಲ್ಲರೂ ಹೇಳುತ್ತಾರೆ. ಹೀಗಾಗಿಯೇ ಹೊಲದಲ್ಲಿ ಕೆಲಸ ಮಾಡುವ ಕಷ್ಟಜೀವಿಗಳು ಈಗಲೂ ರಾಗಿ ಮುದ್ದೆಯನ್ನೇ ನಂಬಿಕೊಂಡಿದ್ದಾರೆ. ರಾಗಿ ಮುದ್ದೆ ತಿಂದು ದುಡಿಯು ಇಳಿದರೆ ಆಯಾಸವೇ ಆಗೋದಿಲ್ಲ. ಆ ಮಟ್ಟಿಗೆ ರಾಗಿ ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ಕೆಲವರಿಗೆ ರಾಗಿ ಮುದ್ದೆ ತಿನ್ನೋದಕ್ಕೆ ಇಷ್ಟವಿರೋದಿಲ್ಲ, ಕೆಲವರಿಗೆ ಇಷ್ಟವಿದ್ದರೂ, ಅದನ್ನು ತಿನ್ನೋ ರೀತಿ ಗೊತ್ತಿರೋದಿಲ್ಲ. ಇದರಿಂದಾಗಿ ಕೆಲವರು ರಾಗಿಯಿಂದ ದೂರವಿರುತ್ತಾರೆ. ಹಾಗೇನಾದರೂ ನೀವೂ ಮಾಡುತ್ತಿದ್ದರೆ ನಿಮಗೇ ಲಾಸ್.‌ ಅದರ ಬದಲು ರಾಗಿಯನ್ನು ಹಲವಾರು ರೀತಿಯಲ್ಲಿ ಉಪಯೋಗಿಸಬಹುದು, ಹಲವಾರು ರೀತಿಯಲ್ಲಿ ಸೇವನೆ ಮಾಡಬಹುದು. ಹಾಗಾದರೆ ಅದರ ವಿವರ ನೋಡೋಣ ಬನ್ನಿ…

ಇದನ್ನೂ ಓದಿ;Dandruff Problem; ತಲೆಹೊಟ್ಟು ಸಮಸ್ಯೆ ನಿವಾರಣೆಯಾಗ್ತಿಲ್ವಾ..?; ಹಾಗಾದ್ರೆ ಟಿಪ್ಸ್‌ Follow ಮಾಡಿ..

ರಾಗಿಯಲ್ಲಿ ಏನೆಲ್ಲಾ ಇರುತ್ತವೆ ಗೊತ್ತಾ..?;

ರಾಗಿಯಲ್ಲಿ ಏನೆಲ್ಲಾ ಇರುತ್ತವೆ ಗೊತ್ತಾ..?; ರಾಗಿ ಸಿರಿಧಾನ್ಯಗಳಲ್ಲಿ ಒಂದು.. ಜನರು ಬಳಕೆ ಮಾಡುವ ಸಿರಿಧಾನ್ಯಗಳಲ್ಲಿ ರಾಗಿ ಈಗಲೂ ಮಹತ್ವ ಉಳಿಸಿಕೊಂಡು ಬಂದಿದೆ. ಸಿರಿಧಾನ್ಯಗಳಲ್ಲಿ ಜನರು ಹೆಚ್ಚಿಗೆ ಉಪಯೋಗಿಸುವುದು ಕೂಡಾ ರಾಗಿಯೇ. ರಾಗಿಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್ ಅತ್ಯಂತ ಅಧಿಕವಾಗಿರುತ್ತದೆ. ಹೀಗಾಗಿ ರಾಗಿ ಸೇವನೆ ಮಾಡುವವರು ಅತ್ಯಂತ ಗಟ್ಟಿಮುಟ್ಟಾಗಿರುತ್ತಾರೆ. ಅವರಿಗೆ ರೋಗ ರುಜಿನಗಳು ಅಷ್ಟೆ ಬೇಗ ಸುಲಿಯೋದಿಲ್ಲ. ರಾಗಿಯಲ್ಲಿನ ಪೋಷಕಾಂಶಗಳು ದೇಹಿಕವಾಗಿ ಸದೃಢರನ್ನಾಗಿ ಮಾಡೋದಲ್ಲದೆ, ಮಾನಸಿಕ ಆರೋಗ್ಯವನ್ನೂ ಕೂಡಾ ಅದು ಕಾಪಾಡುತ್ತದೆ. ಹೀಗಾಗಿಯೇ ನಮ್ಮಲ್ಲಿ ಬಹುತೇಕರು ರಾಗಿ ಮುದ್ದೆಯೇ ಆರೋಗ್ಯಸೂತ್ರವನ್ನಾಗಿ ಮಾಡಿಕೊಂಡಿದ್ದಾರೆ. ದೇವೇಗೌಡರು ಯಾವಾಗಲೂ ರಾಗಿಮುದ್ದೆ ತಿನ್ನುವುದರಿಂದಲೇ 90 ದಾಟಿದರೂ ಇನ್ನೂ ಓಡಾಡುತ್ತಿದ್ದಾರೆ. ರಾಜಕೀಯ ಮಾಡುತ್ತಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದಾಗ, ಸಂಸತ್ತಿನ ಕ್ಯಾಂಟೀನ್‌ನಲ್ಲಿ ರಾಗಿ ಮುದ್ದೆ ಪರಿಚಯಿಸಿದ್ದರು.

ಇದನ್ನೂ ಓದಿ;Ghee Health Benefits; ತುಪ್ಪವನ್ನು ಹೀಗೆ ತಿಂದರೆ ನಿಮ್ಮ ಕಾಯಿಲೆಗಳೆಲ್ಲಾ ಮಾಯ!

ರಾಗಿಯಲ್ಲಿ ಹಲವಾರು ಖಾದ್ಯಗಳನ್ನು ತಯಾರಿಸಬಹುದು;

ರಾಗಿಯಲ್ಲಿ ಹಲವಾರು ಖಾದ್ಯಗಳನ್ನು ತಯಾರಿಸಬಹುದು; ಸಾಮಾನ್ಯವಾಗಿ ರಾಗಿಯಿಂದ ಹಿಟ್ಟು ಮಾಡಿಸಿ ಅದರಿಂದ ನಾವು ಮುದ್ದೆ ಮಾಡುತ್ತೇವೆ. ಇದಿಷ್ಟೇ ಅಲ್ಲದೇ ರಾಗಿಯಿಂದ ದೋಸೆ, ರೊಟ್ಟಿ, ಅಂಬಲಿ ಕೂಡಾ ಮಾಡುತ್ತೇವೆ. ರಾಗಿ ಬಿಸ್ಕೆಟ್‌ ಸೇರಿದಂತೆ ಇನ್ನೂ ಹಲವಾರು ತಿಂಡಿಗಳು ಕೂಡಾ ತಯಾರಾಗುತ್ತವೆ. ಬೆಳಗ್ಗೆ ಎದ್ದು ರಾಗಿ ಅಂಬಲಿ ಮಾಡಿ ಕುಡಿದುಬಿಟ್ಟರೆ ದಿನವಿಡೀ ದೇಹ ಗಟ್ಟಿಮುಟ್ಟಾಗಿರುತ್ತದೆ. ಹಸಿವೆಯೇ ಎನಿಸುವುದಿಲ್ಲ. ಎದೆಹಾಲು ಕಡಿಮೆ ಇರುವ ಬಾಣಂತಿಯರಿಗೆ ರಾಗಿಯ ಜೊತೆಗೆ ಕೊಬ್ಬರಿ, ಬೆಲ್ಲ ಸೇರಿಸಿ ಕೊಡುತ್ತಾರೆ. ವಸಡುಗಳ ಸಮಸ್ಯೆ ಇದ್ದರೆ ರಾಗಿಹಿಟ್ಟಿಗೆ ಉಪ್ಪು ಸೇರಿಸಿ ವಸಡುಗಳ ಮಸಾಜ್‌ ಮಾಡಿದರೆ ಸಮಸ್ಯೆ ಮಾಯವಾಗುತ್ತಂತೆ.
ಮಧುಮೇಹಿಗಳು, ಬೊಜ್ಜು ಇರುವವರು ರಾಗಿ ಮುದ್ದೆ ಸೇವನೆ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತೆ ಅಂತಾರೆ ತಜ್ಞರು. ರಾಗಿ ಸೇವೆನೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ. ಜೊತೆ ರಾಗಿ ಸೇವನೆಯಿಂದ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ. ರಾಗಿ ಸೇವನೆಯಿಂದ ಕರುಳು ಮತ್ತು ಸ್ತನ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.

ಇದನ್ನೂ ಓದಿ; Dry Fruits; ಖಾಲಿ ಹೊಟ್ಟೆಯಲ್ಲಿ ಈ ಒಣಹಣ್ಣುಗಳನ್ನು ತಿನ್ನಲೇಬಾರದು..!

ರಾಗಿ ತಿಂದವನು ಎಂದಿಗೂ ಗಟ್ಟಿ ಇರುತ್ತಾನೆ; ರಾಗಿಯನ್ನು ದಕ್ಷಿಣ ಭಾರತದಲ್ಲಿ ಹೆಚ್ಚು ಬಳಸಲಾಗುತ್ತದೆ. ಕಡಿಮೆ ಮಳೆಯಾಗುವ ಪ್ರದೇಶದಲ್ಲೂ ರಾಗಿ ಬೆಳೆಯುತ್ತದೆ. ಸುಮ್ಮನೆ ರಾಗಿ ಚೆಲ್ಲಿ ಬಂದರೆ ಮಳೆಗೇ ಅದು ಫಸಲು ಕೊಡುತ್ತದೆ. ಇದರಿಂದಾಗಿ ಬಡವರು ಕೂಡಾ ಸುಲಭವಾಗಿ ರಾಗಿ ಬೆಳೆಯುತ್ತಾರೆ. ಬೇರೆ ಆಹಾರಗಳಿಗೆ ಹೋಲಿಸಿದರೆ  ರಾಗಿಗೆ ಕಡಿಮೆ ಬೆಲೆ ಇದೆ. ಹೀಗಾಗಿ ಅದು ಎಲ್ಲರಿಗೂ ಎಟಕುತ್ತದೆ.

ಹೀಗಾಗಿ ಎಲ್ಲರೂ ರಾಗಿ ತಿನ್ನಬಹುದು. ಹಲವಾರು ಖಾದ್ಯಗಳನ್ನು ಮಾಡಿಕೊಳ್ಳಬಹುದು. ಆ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ದೇಹವನ್ನು ಗಟ್ಟಿ ಮುಟ್ಟಾಗಿ ಇಟ್ಟುಕೊಳ್ಳಬಹುದು. ಮೊದಮೊದಲು ರಾಗಿಯನ್ನು ಬಡವರು ತಿಂತಾರೆ ಅನ್ನುತ್ತಿದ್ದರು. ಆದ್ರೆ, ಎಷ್ಟೇ ಶ್ರೀಮಂತರಾದರೂ ಈಗ ರಾಗಿ ತಿನ್ನದೆ ಅವರ ಆರೋಗು ಕಾಪಾಡಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ ಎಂಬ ಮಟ್ಟಿಗೆ ಬಂದಿದೆ. ಮಧುಮೇಹಿಗಳು ರಾಗಿ ತಿಂದರೆ  ಮಾತ್ರ ಅವರ ಸಕ್ಕರೆ ಮಟ್ಟ ಹತೋಟಿಯಲ್ಲಿರೋದು. ಎಲ್ಲಾ ವೈದ್ಯರು ರಾಗಿ ತಿನ್ನುವಂತೆ ಸೂಚನೆ ಕೊಡುತ್ತಾರೆ. ಹೀಗಾಗಿ ಎಲ್ಲಾ ಹೋಟೆಲ್‌ಗಳಲ್ಲೂ ಈಗ ರಾಗಿ ಮುದ್ದೆ ಕಾಮನ್‌ ಆಗಿದೆ.

Share Post