InternationalPolitics

Pakisthan Election; ಪಾಕಿಸ್ತಾನದಲ್ಲಿ ಮತಎಣಿಕೆ ಬಿರುಸು; ಯಾರಿಗೆ ಅಧಿಕಾರ..?

ಕರಾಚಿ; ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ಫಲಿತಾಂಶ ಇವತ್ತು ಬರಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಹಲವು ದಾಳಿಗಳು ಹಿಂಸಾಚಾರಗಳ ನಡುವೆ 265 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಈ ಬಾರಿ ಯಾವ ಪಾರ್ಟಿ ಅಧಿಕಾರಕ್ಕೆ ಬರುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ. ಬೆಳಗ್ಗೆಯಿಂದಲೇ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ; Haldwani Riots; ಹಲ್ದ್ವಾನಿಯಲ್ಲಿ ಹಿಂಸಾಚಾರಕ್ಕೆ 4 ಬಲಿ; ಕರ್ಫ್ಯೂ ಜಾರಿ

ಚುನಾವಣೆ ಸಮಯದಲ್ಲಿ ದಾಳಿಗಳು, ಸ್ಫೋಟಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಎಲ್ಲೆಡೆ ಮತ ಎಣಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಸಂಜೆಯ ವೇಳೆ ಸ್ಪಷ್ಟ ಫಲಿತಾಂಶ ಲಭ್ಯವಾಗಲಿದೆ.

11 ಕ್ಷೇತ್ರಗಳ ಫಲಿತಾಂಶ ಲಭ್ಯ, ಯಾರಿಗೆ ಎಷ್ಟು ಸ್ಥಾನ..?

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ರಾಷ್ಟ್ರೀಯ ಅಸೆಂಬ್ಲಿಯ 265 ಸ್ಥಾನಗಳ ಫಲಿತಾಂಶಗಳನ್ನು ಪ್ರಕಟವಾಗಲಿದೆ. ಪಾಕಿಸ್ತಾನದ ಚುನಾವಣಾ ಆಯೋಗವು ಇದುವರೆಗೆ 11 ಸ್ಥಾನಗಳಿಗೆ ಫಲಿತಾಂಶವನ್ನು ಪ್ರಕಟಿಸಿದೆ. ಈ ಫಲಿತಾಂಶಗಳಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಐದು ಸ್ಥಾನಗಳನ್ನು ಗೆದ್ದಿದೆ.

ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಕ್ಕೆ ಸ್ಪರ್ಧಿಸಿದ್ದ ನಾಲ್ವರು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ. ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಎರಡು ಸ್ಥಾನಗಳನ್ನು ಗೆದ್ದಿದೆ.

ಇದನ್ನೂ ಓದಿ; Amit Sha and Hdk; ನಾಳೆ ಕುಮಾರಸ್ವಾಮಿ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ..?

ಒಂದು ಕ್ಷೇತ್ರದಲ್ಲಿ ಅಭ್ಯರ್ಥಿ ಸಾವಿನಿಂದ ಚುನಾವಣೆ ಮುಂದೂಡಿಕೆ

ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 336 ಸ್ಥಾನಗಳಿವೆ. ಈ ಪೈಕಿ 266 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಉಳಿದ 70 ಸೀಟುಗಳು ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಹಂಚಿಕೆಯಾಗಲಿವೆ. ಆದರೆ, ಒಂದು ಸ್ಥಾನದಲ್ಲಿ ಅಭ್ಯರ್ಥಿ ಸಾವನ್ನಪ್ಪಿದ್ದರಿಂದ 265 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದೆ.

ಇದನ್ನೂ ಓದಿ;Lazy Rich; ಶ್ರೀಮಂತರಾಗಬೇಕೆ..?, ಹಾಗಾದ್ರೆ ಈ 10 ವರ್ಷ ಶತ ಸೋಮಾರಿಗಳಾಗಿಬಿಡಿ!

Share Post