Pregnant in Jail; ಜೈಲಿನಲ್ಲೇ ಗರ್ಭಿಣಿಯರಾಗುತ್ತಿರುವ ಮಹಿಳಾ ಕೈದಿಗಳು!; ಕೋರ್ಟ್ ಕೊಟ್ಟ ಆದೇಶ ಏನು..?
ಕೊಲ್ಕತ್ತಾ; ಅಪರಾಧಿಗಳನ್ನು ಜೈಲಿಗೆ ಕಳುಹಿಸೋದು ಶಿಕ್ಷೆ ನೀಡೋದಕ್ಕೆ. ಆದ್ರೆ ಇತ್ತೀಚೆಗೆ ಜೈಲುಗಳು ಲಾಡ್ಜ್‌ಗಳು ರೀತಿಯಲ್ಲಿ ಬದಲಾಗುತ್ತಿವೆ. ಜೈಲುಗಳಲ್ಲಿ ಗಾಂಜಾ, ಡ್ರಗ್ಸ್, ಮದ್ಯ ಎಲ್ಲವೂ ಸಿಗುವುದನ್ನು ಈಗಾಗಲೇ ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಹಣ ಒಂದು ಕೊಟ್ಟರೆ ಜೈಲಿನೊಳಗೆ ಏನು ಬೇಕಾದರೂ ಪೂರೈಸಬಹುದು. ಆ ಮಟ್ಟಿಗೆ ಜೈಲುಗಳ ಭದ್ರೆತ ಹದಗೆಟ್ಟಿದೆ. ಕೊಲೆಗಾರರಯ, ರೌಡಿಗಳು ಜೈಲಿನಲ್ಲಿ ಮೊಬೈಲ್‌ಗಳನ್ನು ಬಳಸುತ್ತಾರೆ. ಜೈಲಿನಿಂದ ಸ್ಕೆಚ್ ಹಾಕಿ ಮರ್ಡರ್‌ಗಳನ್ನೂ ಮಾಡಿಸುತ್ತಾರೆ. ಇಂತಹ ಘಟನೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟು ನಡೆದಿವೆ. ಇಷ್ಟೇ ಆಗಿದ್ದರೆ ಈ ಸುದ್ದಿ ಅವಶ್ಯಕತೆ ಇರಲಿಲ್ಲ ಅನಿಸುತ್ತೆ. ಆದ್ರೆ ಪಶ್ಚಿಮ ಬಂಗಾಳದ ಜೈಲುಗಳಲ್ಲಿರುವ ಮಹಿಳಾ ಕೈದಿಗಳು, ಜೈಲಿನಲ್ಲೇ ಗರ್ಭ ಧರಿಸುತ್ತಿದ್ದಾರಂತೆ.. ಇಂಹದ್ದೊಂದು ಘಾತಕಾರಿ ವಿಚಾರವನ್ನು ವಕೀಲರೊಬ್ಬರು ಬಯಲಿಗೆಳೆದಿದ್ದಾರೆ.
ಇದನ್ನೂ ಓದಿ; Congress VS bjp; ಬಿಜೆಪಿ ಶ್ವೇತ ಪತ್ರ, ಕಾಂಗ್ರೆಸ್ ಕಪ್ಪು ಪತ್ರ; ಏನಿದು ಜಟಾಪಟಿ?
ಪಶ್ಚಿಮ ಬಂಗಾಳ ಹೈಕೋರ್ಟ್‌ನಲ್ಲಿ ಪಿಐಎಲ್
ಪಶ್ಚಿಮ ಬಂಗಾಳ ಹೈಕೋರ್ಟ್‌ನಲ್ಲಿ ಪಿಐಎಲ್; ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಮಹಿಳಾ ಕೈದಿಗಳು ಗರ್ಭಿಣಿಯರಾಗುತ್ತಿದ್ದಾರಂತೆ. ಇಂತಹದ್ದೊಂದು ಆಘಾತಕಾರಿ ಸುದ್ದಿಯೊಂದರನ್ನು ವಕೀಲರೊಬ್ಬರು ಬಯಲಿಗೆಳೆದಿದ್ದಾರೆ. ಇದರ ವಿರುದ್ಧ ವಕೀಲರು ಪಶ್ಚಿಮ ಬಂಗಾಳ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ನಾನು ಇತ್ತೀಚೆಗೆ ಜೈಲೊಂದಕ್ಕೆ ಭೇಟಿ ನೀಡಿದಾಗ ಅಲ್ಲಿನ ಕೈದಿಗಳು ಗರ್ಭಿಯರಾಗಿರುವುದನ್ನು ನೋಡಿದೆ ಎಂದು ವಕೀಲರು ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ; Parashurama Themepark; ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ವಿವಾದ; ಸಿಐಡಿ ತನಿಖೆಗೆ ವಹಿಸಿದ ಸರ್ಕಾರ
15 ಮಹಿಳಾ ಕೈದಿಗಳು ಗರ್ಭಿಣಿಯರಾಗಿದ್ದರು..!
15 ಮಹಿಳಾ ಕೈದಿಗಳು ಗರ್ಭಿಣಿಯರಾಗಿದ್ದರು..!; ಕೋರ್ಟ್‌ನಲ್ಲಿ ವಾದ ಮಂಡಿಸಿರುವ ವಕೀಲರು ನಾನು ಜೈಲೊಂದಕ್ಕೆ ಭೇಟಿ ಕೊಟ್ಟಿದ್ದೆ. ಈ ವೇಳೆ ಮಹಿಳಾ ಕೈದಿಗಳು ಗರ್ಭಿಣಿಯರಾಗಿದ್ದರು. 15 ಮಹಿಳಾ ಕೈದಿಗಳು ಗರ್ಭಿಣಿಯರಾಗಿದ್ದದ್ದು ನೋಡಿದೆ ಎಂದು ವಕೀಲರು ಹೇಳಿದ್ದಾರೆ. ಜೈಲಿನಲ್ಲಿ ಮಹಿಳಾ ಕೈದಿಗಳಿಗೆ ಪ್ರತ್ಯೇಕ ಕೊಠಡಿಗಳಿರುತ್ತವೆ. ಪುರುಷ ಕೈದಿಗಳಿಗೂ, ಮಹಿಳಾ ಕೈದಿಗಳಿಗೂ ಸಂಪರ್ಕವೇ ಇರುವುದಿಲ್ಲ. ಆದರೂ ಮಹಿಳಾ ಕೈದಿಗಳು ಗರ್ಭಿಣಿಯರಾಗಿದ್ದಾರೆ ಎಂದು ವಕೀಲರು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಿಳಾ ಕೈದಿಗಳಿಗೆ 196 ಮಕ್ಕಳು ಹುಟ್ಟಿವೆ
ಮಹಿಳಾ ಕೈದಿಗಳಿಗೆ 196 ಮಕ್ಕಳು ಹುಟ್ಟಿವೆ; ಪಿಐಎಲ್ ಸಲ್ಲಿಸಿರುವ ವಕೀಲರು ಹೇಳಿರುವ ಮತ್ತೊಂದು ಆತಂಕಕಾರಿ ವಿಚಾವಿದು. ಅವರ ಪ್ರಕಾರ ಜೈಲುಗಳಲ್ಲಿರುವ ಮಹಿಳಾ ಕೈದಿಗಳಿಗೆ ಇದುವರೆಗೆ 196 ಮಕ್ಕಳು ಹುಟ್ಟಿವೆಯಂತೆ. ಇದು ಬಹಳ ಗಂಭೀರವಾದ ಪ್ರಕರಣ, ಜೈಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು. ಜೈಲಿನಲ್ಲೇ ಮಹಿಳೆಯರಿಗೆ ಭದ್ರತೆ ಇಲ್ಲದಿದ್ದರೆ ಹೇಗೆ ಎಂದು ವಕೀಲರು ಪ್ರಶ್ನೆ ಮಾಡಿದ್ದಾರೆ.
ಪುರುಷ ಉದ್ಯೋಗಿಗಳಿಗೆ ನಿರ್ಬಂಧ
ಪುರುಷ ಉದ್ಯೋಗಿಗಳಿಗೆ ನಿರ್ಬಂಧ; ಕೋರ್ಟ್ ಕೂಡಾ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಜೈಲು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ವರದಿ ಕೊಡುವಂತೆಯೂ ಸೂಚನೆ ಕೊಟ್ಟಿದೆ. ಅಲ್ಲದೆ ಮಹಿಳಾ ಸುಧಾರಣಾ ಗೃಹಗಳಿಗೆ ಪುರುಷ ಉದ್ಯೋಗಿಗಳ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ಜೊತೆಗೆ ಈ ಪಿಐಎಲ್‌ನ್ನು ವಿಭಾಗೀಯ ಪೀಠಕ್ಕೆ ವರ್ಗಾವಣೆ ಮಾಡುವುದಾಗಿಯೂ ನ್ಯಾಯಮೂರ್ತಿಗಳು ಹೇಳಿದ್ದಾರೆ.