LifestyleSports

Irfan Ptan: 8 ವರ್ಷಗಳ ನಂತರ ಪತ್ನಿಯ ಮುಖ ತೋರಿಸಿದ ಇರ್ಫಾನ್‌ ಪಠಾಣ್‌!

ಮುಂಬೈ; ಕ್ರಿಕೆಟಿಗ ಇರ್ಫಾನ್‌ ಫಠಾಣ್‌ ಮದುವೆಯಾಗಿ ಎಂಟು ವರ್ಷಗಳಾಗಿವೆ. ಮೊನ್ನೆಯಷ್ಟೇ ಅವರು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಆದ್ರೆ ಇದುವರೆಗೂ ಇರ್ಫಾನ್‌ ಪಠಾಣ್‌ ಅವರು ತಮ್ಮ ಪತ್ನಿ ಮುಖವನ್ನು ಹೊರಜಗತ್ತಿಗೆ ತೋರಿಸಿಯೇ ಇರಲಿಲ್ಲ. ಇರ್ಫಾನ್‌ ಪಠಾಣ್‌ ಜೊತೆ ಪತ್ನಿ ಹೊರಗೆ ಬರುತ್ತಿದ್ದರಾದರೂ ಯಾವತ್ತೂ ಬುರ್ಖಾವನ್ನು ತೆಗೆದೇ ಇರಲಿಲ್ಲ. ಆದ್ರೆ ಇದೇ ಮೊದಲ ಬಾರಿಗೆ ಇರ್ಫಾನ್‌ ಪಠಾಣ್‌ ಅವರ ಪತ್ನಿ ಮುಖವನ್ನು ತೋರಿಸಲಾಗಿದೆ. ಇರ್ಫಾನ್‌ ಪತ್ನಿ ಸಫಾ ಬೇಗ್‌ ಅವರ ಫೋಟೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಫೋಟೋಗಳಲ್ಲಿ ಕೂಡಾ ಇರ್ಫಾನ್‌ ಪತ್ನಿ ಬುರ್ಖಾ ಧರಿಸಿಕೊಂಡೇ ಇರುತ್ತಿದ್ದರು. ಯಾವತ್ತೂ ಅವರ ಮುಖ ತೋರಿಸಿರಲಿಲ್ಲ. ಹೊರ ಜಗತ್ತಿಗೆ ಅವರು ಹೇಗಿದ್ದಾರೆ ಅನ್ನೋದೇ ತಿಳಿದಿರಲಿಲ್ಲ. ಹೀಗಾಗಿ ಸಾಕಷ್ಟು ಜನಕ್ಕೆ ಈ ಬಗ್ಗೆ ಕುತೂಹಲವಿತ್ತು. ಕೆಲವರು ನಿಮ್ಮ ಪತ್ನಿಯ ಮುಖ ತೋರಿಸಿ ಎಂದು ಕೇಳಿದ್ದರು ಕೂಡಾ.

ಇದೀಗ ಪಠಾಣ್‌ ಅವರೇ ಸಾಮಾಜಿಕ ಜಾಲತಣದಲ್ಲಿ ತನ್ನ ಪತ್ನಿಯ ಬುರ್ಖಾವಿಲ್ಲದ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹರಿದಾಡುತ್ತಿವೆ. ವೈರಲ್‌ ಆಗುತ್ತಿದೆ. ಇದಕ್ಕೆ ಸಾಕಷ್ಟು ಪಾಸಿಟಿವ್‌ ಹಾಗೂ ನೆಗೆಟಿವ್‌ ಕಾಮೆಂಟ್‌ಗಳು ಬರುತ್ತಿವೆ. ಇಷ್ಟು ದಿನ ಮುಖ ತೋರಿಸದೇ ಇದ್ದುದಕ್ಕಾಗಿ ಕೆಲವರು ಟೀಕೆ ಕೂಡಾ ಮಾಡಿದ್ದಾರೆ.

 

Share Post