ಜಿಎಸ್‌ಟಿ ಆದಾಯದಲ್ಲಿ ಶೇ.10ರಷ್ಟು ಹೆಚ್ಚಳ; ಬಜೆಟ್ ದಿನವೇ ಗುಡ್ ನ್ಯೂಸ್
ನವದೆಹಲಿ; ಜಿಎಸ್‌ಟಿ ಜಾರಿಗೆ ಬಂದ ಮೇಲೆ ಕೇಂದ್ರ ಸರ್ಕಾರಕ್ಕೆ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಾಗುತ್ತಿದೆ.ಈ ವರ್ಷ ಕೂಡಾ ಕಳೆದ ವರ್ಷಕ್ಕೆ ಹೋಲಿಸಿದರೆ ಜಿಎಸ್‌ಟಿ ಆದಾಯ ಶೇ.10ರಷ್ಟು ಏರಿಕೆಯಾಗಿದೆ. 2024ರ ಜನವರಿಯಲ್ಲಿ 1.72 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಶೇ. 10.4ರಷ್ಟು ಏರಿಕೆಯಾಗಿದೆ.
ಏಪ್ರಿಲ್ 2023 ರಿಂದ ಜನವರಿ 2024ರ ಅವಧಿಯಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹ 16.69 ಲಕ್ಷ ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. 2022ನೇ ಸಾಲಿಗೆ ಹೋಲಿಸಿದರೆ ಈ ವರ್ಷ ಅತಿಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಶೇ. 11.6ರಷ್ಟು ಹೆಚ್ಚು ಆದಾಯ ಬಂದಿದೆ. 2022-2023 ಅವಧಿಯಲ್ಲಿ 14.96 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿತ್ತು ಎಂದು ಅಂಕಿ ಅಂಶಗಳು ಹೇಳುತ್ತಿವೆ.