NationalPolitics

ಕಾಂಗ್ರೆಸ್‌ ಬೀದಿಗಿಳಿದು ಜನರಿಗೆ ತೊಂದರೆ ಕೊಡುತ್ತಿದೆ; ಸಚಿವ ಪ್ರಲ್ಹಾದ್‌ ಜೋಷಿ ವಾಗ್ದಾಳಿ

ನವದೆಹಲಿ;  ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಸಂಬಂಧ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ ಇಂದು ಇಡಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್‌ನಿಂದ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಇತ್ತ ಲೋಕಸಭೆಯಲ್ಲೂ ಕಾಂಗ್ರೆಸ್‌ ಸಂಸದರು ಪ್ರತಿಭಟನೆ ನಡೆಸಿದ್ದಾರೆ. ದ್ವೇಷದ ಕಾರಣದಿಂದ ನಮ್ಮ ನಾಯಕರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಷಿ, ಸೋನಿಯಾಗಾಂಧಿಯವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ. ಅವರು ವಿಚಾರಣೆ ಎದುರಿಸಲಿ. ವಿಚಾರಣೆಗೆ ಕರೆದರೆ ಪತಿಭಟನೆ ಯಾಕೆ ಮಾಡಬೇಕು..?. ಹೀಗೆ ಪ್ರತಿಭಟನೆ ಮಾಡಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾನೂನು ಎಲ್ಲರಿಗೂ ಒಂದೇ.  ಸಾಮಾನ್ಯ ಜನಕ್ಕೆ ಬೇರೆ, ಕಾಂಗ್ರೆಸ್‌ ನಾಯಕರಿಗೆ ಬೇರೆ ಎಂಬುದು ಇರೋದಿಲ್ಲ ಎಂದು ಇದೇ ವೇಳೆ ಜೋಷಿ ಹೇಳಿದ್ದಾರೆ.

 

Share Post