HealthNational

ಗಣರಾಜ್ಯೋತ್ಸವದ ವೇಳೆ ಕುಸಿದುಬಿದ್ದ ತೆಲಂಗಾಣದ ಮಾಜಿ ಡಿಸಿಎಂ

ಹೈದರಾಬಾದ್‌; ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ಆಯೋಜನೆ ವೇಳೆ ತೆಲಂಗಾಣದ ಮಾಜಿ ಡಿಸಿಎಂ ಒಬ್ಬರು ಕುಸಿದುಬಿದ್ದಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಮಹಮದ್‌ ಅಲಿ ಅವರು 75ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸುಸ್ತಾಗಿ ಕುಸಿದುಬಿದ್ದಿದ್ದಾರೆ.

ತೆಲಂಗಾಣ ಭವನದಲ್ಲಿ ಈ ಘಟನೆ ನಡೆದಿದೆ, ಪ್ರಜ್ಞೆ ತಪ್ಪಿಬಿದ್ದ ಅವರು, ನೀರು ನೀರು ಕೊಡಿ ಎಂದು ಬೇಡಿಕೊಳ್ಳುತ್ತಿದ್ದರು. ಕೂಡಲೇ ಅವರ ನೆರವಿಗೆ ಬಂದ ಜನರು ಹಾಗೂ ಭದ್ರತಾ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಅವರ ಆರೋಗ್ಯ ಸುಧಾರಿಸಿದೆ ಎಂದು ತಿಳಿದುಬಂದಿದೆ.

 

Share Post