National

ಸಂಸತ್ತಿನಲ್ಲಿ ಇನ್ನು ಈ ಪದಗಳನ್ನು ಬಳಸುವಂತಿಲ್ಲ; ಯಾವುದೆಲ್ಲಾ ಅಸಂಸದೀಯ ಗೊತ್ತಾ..?

ನವದೆಹಲಿ; ಸಂಸತ್ತಿನ ಉಭಯ ಸದನಗಳಲ್ಲಿ ಕೆಲ ಪದಗಳನ್ನು ಬಳಸಬಾರದೆಂದು ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಈ ಬಗ್ಗೆ ಒಂದು ಕಿರುಪುಸ್ತಕವನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಉಲ್ಲೇಖಿಸಲಾದ ಪದಗಳು ಅಂಸದೀಯ ಎಂದು ಪರಿಗಣಿಸಲಾಗಿದೆ.

ಜುಮ್ಲಾಜೀವಿ, ಬಾಲ ಬುದ್ಧಿ, ಕೋವಿಡ್ ಸ್ಪ್ರೆಡ್ಡರ್‌ (ಕೋವಿಡ್‌ ನಿರ್ವಹಣೆ ಸಂಬಂಧಿಸಿದ ಟೀಕೆ) ಮತ್ತು ಸ್ನೂಪ್‌ಗೇಟ್ (ಪೆಗಾಸಿಸ್‌ ಹಗರಣ), ಅಶೇಮ್ಡ್‌ (ನಾಚಿಕೆಗೇಡು),  ಅಬ್ಯೂಸ್ಡ್‌– (ದುರುಪಯೋಗ, ನಿಂದನೆ), ಬೆಟ್ರಾಯ್ಡ್‌ (ದ್ರೋಹ), ಕರಪ್ಟ್‌ (ಭ್ರಷ್ಟ), ಡ್ರಾಮ (ನಾಟಕ), ಹಿಪೊಕ್ರಸಿ (ಬೂಟಾಟಿಕೆ) ಮತ್ತು ಇನ್‌ಕಾಂಪೆಟೆಂಟ್‌ (ಅಸಮರ್ಥ) ಈ ರೀತಿಯ ಪದ ಬಳಕೆಗೆ ನಿರ್ಬಂಧ ಹೇರಲಾಗಿದೆ. ಆದ್ರೆ ಕೇಂದ್ರ ಸರ್ಕಾರದ ಈ ತೀರ್ಮಾನಕ್ಕೆ ವಿರೋಧ ಪಕ್ಷಗಳ ಆಕ್ರೋಶ ವ್ಯಕ್ತಪಡಿಸಿವೆ. ಕಾಂಗ್ರೆಸ್‌, ಟಿಎಂಸಿ ಸೇರಿ ಹಲವು ಪಕ್ಷಗಳ ನಾಯಕರು ಈ ಬಗ್ಗೆ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Post