ನಾಗರಹೊಳೆಯ ಬಫರ್ ಜೋನ್ನಲ್ಲಿ ಸಫಾರಿ..?
ಮೈಸೂರು: ಪ್ರಾಣಿಪ್ರಿಯರ ನೆಚ್ಚಿನ ತಾಣ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಫರ್ ಜೋನ್ನಲ್ಲಿ ಹೊಸ ಸಫಾರಿ ಶುರುವಾಗಲಿದೆ. ಸುಮಾರು 200 ಚ.ಕಿ.ಮೀ. ವ್ಯಾಪ್ತಿಯ ಬಫರ್ ಜೋನ್ ಇದೆ. ಇಲ್ಲಿಯೂ ವನ್ಯಜೀವಿಗಳ ಓಡಾಟ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಬಫರ್ ಜೋನ್ನಲ್ಲಿ ಸಫಾರಿ ಆರಂಭಿಸಲು ಅನುಮತಿ ಕೋರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ. ಪಿಸಿಸಿಎಫ್ ಅನುಮತಿ ನೀಡಿದ್ರೆ ಜನವರಿಯಲ್ಲಿ ಸಫಾರಿ ನಡೆಸುವ ಯೋಜನೆ ಇದೆಯೆಂದು ನಾಗರಹೊಳೆ ಡಿಸಿಎಫ್ ಮಹೇಶ್ ಕುಮಾರ್ ತಿಳಿಸಿದ್ದಾರೆ. ಜೊತೆಗೆ ರಾಜ್ಯದಲ್ಲೇ ಬಫರ್ಜೋನ್ನಲ್ಲಿ ಸಫಾರಿ ಆಗುತ್ತಿರುವ ಮೊದಲ ಅರಣ್ಯ ಪ್ರದೇಶ ನಾಗರಹೊಳೆ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಉತ್ತರ ಪ್ರದೇಶದ ತಡಬ ಸೇರಿದಂತೆ ಇತರ ರಾಜ್ಯಗಳಲ್ಲಿ ಬಫರ್ಜೋನ್ನಲ್ಲಿ ಸಫಾರಿ ನಡೆಸಲಾಗುತ್ತಿದೆ. ಆದರೆ, ದಕ್ಷಿಣ ಭಾರತದಲ್ಲಿ ಇದೇ ಮೊದಲನೆಯದಾಗುತ್ತದೆ. ಈ ಪ್ರದೇಶದಲ್ಲಿ ಸಫಾರಿ ನಡೆಸಿದ್ರೆ ವನ್ಯಜೀವಿಗಳ ಸಂರಕ್ಷಣೆ ಜೊತೆಗೆ ಕಳ್ಳ ಬೇಟೆಗಾರರ ಮೇಲೆ ನಿಗಾ ಇಡುವ ಉದ್ದೇಶದಿಂದ ಈ ಯೋಜನೆ ಸಿದ್ಧವಾಗುತ್ತಿದೆ. ಇದರಿಂದ ವಾರ್ಷಿಕ ಆದಾಯ ಹೆಚ್ಚಾಗುವುದರ ಜೊತೆಗೆ ಸ್ಥಳೀಯರಿಗೆ ಮತ್ತಷ್ಟು ಉದ್ಯೋಗ ನೀಡಲು ಸಹಕಾರಿಯಾಗುತ್ತದೆ” ಎಂದು ಡಿಸಿಎಫ್ ಮಹೇಶ್ ಕುಮಾರ್ ತಿಳಿಸಿದ್ದಾರೆ.