ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದ ಭಾರತ ಮೂಲದ ವಿವೇಕ್
ನ್ಯೂಯಾರ್ಕ್; ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಹಿಂದೆ ಸರಿದಿದ್ದಾರೆ. ಕಳೆದ ಫೆಬ್ರವರಿಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಾಗಿ ಹೇಳಿದ್ದರು. ಆದ್ರೆ ಅಧ್ಯಕ್ಷೀಯ ಅಭ್ಯರ್ಥಿಯನ್ನು ನಿರ್ಧಾರ ಮಾಡಲು ನಡೆದ ಮತದಾನದಲ್ಲಿ ಕಳಪೆ ಪ್ರದರ್ಶನ ಮಾಡಿದ ಬೆನ್ನಲ್ಲೇ ವಿವೇಕ್ ರಾಮಸ್ವಾಮಿ ಈ ನಿರ್ಧಾರ ಕೈಗೊಂಡಿದ್ದಾರೆ.
ಹೀಗಾಗಿ ಈಗ ಡೊನಾಲ್ಡ್ ಟ್ರಂಪ್ ಹೊರತುಪಡಿಸಿದರೆ ನಿಕ್ಕಿ ಹ್ಯಾಲಿ ಮತ್ತು ರಾನ್ ಡಿಸಾಂಟಿಸ್ ರಿಪಬ್ಲಿಕನ್ ಪಾರ್ಟಿ ರೇಸ್ನಲ್ಲಿ ಉಳಿದಿದ್ದಾರೆ. ವೇಕ್ ರಾಮಸ್ವಾಮಿ ಬಿಲಿಯನೇರ್ ಉದ್ಯಮಿ ಮತ್ತು ಬಯೋಟೆಕ್ ಕಂಪನಿಯ ಮುಖ್ಯಸ್ಥ. ರಾಮಸ್ವಾಮಿ ಅವರ ಪೋಷಕರು ಭಾರತದ ಕೇರಳ ನಿವಾಸಿಗಳಾಗಿದ್ದು, ಅವರು ಅಮೆರಿಕದಲ್ಲಿ ನೆಲೆಸಿದ್ದರು.