BengaluruCinema

ಫೈಟ್‌ ಸೀನ್‌ ಚಿತ್ರೀಕರಣದ ವೇಳೆ ಕಟ್ಟಡದಿಂದ ಕೆಳಗೆ ಬಿದ್ದ ಬಿಗ್‌ ಬಾಸ್‌ ವಿನ್ನರ್‌ ಶಶಿ!

ಬೆಂಗಳೂರು; ಮೆಹಬೂಬಾ ಸಿನಿಮಾ ಶೂಟಿಂಗ್‌ ವೇಳೆ ಕಟ್ಟಡದ ಮೇಲಿಂದ ಬಿದ್ದು ನಟ ಶಶಿ ಪೆಟ್ಟು ಮಾಡಿಕೊಂಡಿದ್ದಾರೆ. ಫೈಟ್‌ ಸೀನ್‌ನಲ್ಲಿ ನಟ ಶಶಿ ಕಟ್ಟಡ ಹತ್ತುವ ವೇಳೆ ಸ್ಕಿಡ್‌ ಆಗಿ ಕೆಳಗೆ ಬಿದ್ದಿದ್ದಾರೆ. ಇದರಿಂದಾಗಿ ಶಶಿಗೆ ಪೆಟ್ಟಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಮಾಡರ್ನ್‌ ರೈತ ಎಂದೇ ಖ್ಯಾತಿ ಗಳಿಸಿರುವ ಶಶಿ, ಬಿಗ್‌ಬಾಸ್‌ 6ರ ವಿನ್ನರ್‌. ಅವರು ಮೆಹಬೂಬಾ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಇದರ ಕ್ಲೈಮ್ಯಾಕ್ಸ್‌ ಚಿತ್ರೀಕರಣ ನಡೆಯುತ್ತಿದೆ. ಅದರ ರಿಸ್ಕಿ ಸೀನ್ಸ್‌ ಶೂಟ್‌ ಮಾಡುವ ವೇಳೆ ಈ ಅನಾಹುತ ನಡೆದಿದೆ.

 

Share Post