ಚಾಮರಾಜನಗರ ಸಹಕಾರಿ ಬ್ಯಾಂಕ್ ಚುನಾವಣೆಗೆ ಹೈಕೋರ್ಟ್ ತಾಕೀತು; ಸಿದ್ದು, ಜಿಟಿಡಿ ಫೈಟ್ಗೆ ವೇದಿಕೆ ರೆಡಿ
ಮೈಸೂರು; ಸಹಕಾರಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಇದೀಗ ಅವರ ನೇರಾನೇರ ಫೈಟ್ಗೆ ವೇದಿಕೆ ರೆಡಿಯಾಗಿದೆ. ಯಾಕಂದ್ರೆ ಮೈಸೂರು – ಚಾಮರಾಜನಗರ ಸಹಕಾರಿ ಬ್ಯಾಂಕ್ ಚುನಾವಣೆಯನ್ನು ಎಂಟು ವಾರಗಳಲ್ಲಿ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಹೀಗಾಗಿ ಈ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಮೇಲೈಗೈ ಸಾಧಿಸುತ್ತಾರಾ ಅಥವಾ ಸಹಕಾರಿ ಕ್ಷೇತ್ರವನ್ನು ಜಿ.ಟಿ.ದೇವೇಗೌಡರೇ ಉಳಿಸಿಕೊಳ್ಳುತ್ತಾರಾ ಎಂಬುದರ ಬಗ್ಗೆ ಕುತೂಹಲ ಕೆರಳಿಸಿದೆ.
ಸಹಕಾರ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರ ಕುಟುಂಬದ ಹಿಡಿತ ತಪ್ಪಿಸೋದಕ್ಕೆ ಸಿಎಂ ಸಿದ್ದರಾಮಯ್ಯ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪವಿತ್ತು. ಇದೀಗ ಕೋರ್ಟ್ ಚುನಾವಣೆ ನಡೆಸಲೇಬೇಕು ಎಂದು ಆದೇಶ ಹೊರಡಿಸಿದೆ. ಅದೂ ಕೂಡಾ ಲೋಕಸಭಾ ಚುನಾವಣೆಗೂ ಮೊದಲೇ ಈ ಚುನಾವಣೆ ನಡೆಯಲಿದೆ. ಇದರಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಅನ್ನೋದು ಕುತೂಹಲದ ಸಂಗತಿ.
ನವೆಂಬರ್ನಲ್ಲೇ ಚುನಾವಣೆ ನಡೆಸಬೇಕೆಂದು ಮೈಸೂರು ಜಿಲ್ಲಾಧಿಕಾರಿ ಆದೇ ಹೊರಡಿಸಿದ್ದರು. ಆದ್ರೆ ಮತದಾರರ ಪಟ್ಟಿ ಪರಿಷ್ಕರಣೆ ಕಾರಣ ನೀಡಿ ದಿಢೀರ್ ಅಂತ ಚುನಾವಣೆಯನ್ನು ರದ್ದು ಮಾಡಲಾಗಿತ್ತು. ಹೀಗಾಗಿ ಮಾಜಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಬೆಂಬಲಿಗರು ಚುನಾವಣೆ ನಡೆಸಲೇಬೇಕು. ಚುನಾವಣೆಗಾಗಿ ಆದೇಶ ನೀಡುವಂತೆ ಕೋರ್ಟ್ನಲ್ಲಿ ಮನವಿ ಮಾಡಿದ್ರು.