ಕೊರೊನಾ ರೂಪಾಂತರಿ ತಳಿ ಹಾವಳಿ; ಕೇರಳ ಗಡಿ ಜಿಲ್ಲೆಗಳಲ್ಲಿ ಹೆಚ್ಚಿದ ಆತಂಕ
ಬೆಂಗಳೂರು; ನೆರೆಯ ಕೇರಳ ಹಾಗೂ ತಮಿಳುನಾಡಿನಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಭೀತಿ ಹೆಚ್ಚಾಗಿದೆ. ಕೇರಳದಿಂದ ಬರುವ ಹೋಗುವವರ ಮೇಲೆ ನಿಗಾ ಇಡಲು ಸರ್ಕಾರ ಸೂಚನೆ ಕೊಟ್ಟಿದೆ.
ಇನ್ನೊಂದೆಡೆ ಶಾಲಾ ಮಕ್ಕಳಲ್ಲೂ ಶೀತ, ಜ್ವರ, ಕೆಮ್ಮು ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ ಕೊವಿಡ್ ಭೀತಿ ಎದುರಾಗಿದೆ. ಹೀಗಾಗಿ, ತೀವ್ರ ಮುನ್ನೆಚ್ಚರಿಕೆಗಳನ್ನು ವಹಿಸಲಾಗಿದೆ. ಅಯ್ಯಪ್ಪ ಭಕ್ತರು, ಸೇರಿದಂತೆ ಕೇರಳದಿಂದ ಬರುವವರ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ.