ಹೊಸ ವರ್ಷಾಚರಣೆಗೆ 2 ಲಕ್ಷ ಲಡ್ಡು ಪ್ರಸಾದ ತಯಾರಿ; ಬಾಷ್ಯಂ ಸ್ವಾಮೀಜಿ
ಮೈಸೂರು; ಮೈಸೂರಿನ ಯೋಗನರಸಿಂಹ ದೇವಸ್ಥಾನದಲ್ಲಿ ಪ್ರತಿ ವರ್ಷದ ಜನವರಿ 1 ರಂದು ದೇಗುಲಕ್ಕೆ ಬರುವ ಭಕ್ತಾಧಿಗಳಿಗೆ ಲಕ್ಷ ಲಕ್ಷ ಲಡ್ಡು ಪ್ರಸಾದ ವಿತರಣೆ ಮಾಡಲಾಗುತ್ತದೆ. ಈ ಬಾರಿಯೂ ಕೂಡಾ ಲಡ್ಡು ತಯಾರಿ ಕಾರ್ಯ ನಡೆಯುತ್ತಿದೆ. ಈ ಬಾರಿ ಎರಡು ಲಕ್ಷ ಲಡ್ಡು ತಯಾರಿ ಮಾಡಲಾಗುತ್ತಿದೆ ಎಂದು ಯೋಗನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕ ಬಾಷ್ಯಂ ಸ್ವಾಮೀಜಿ ತಿಳಿಸಿದ್ದಾರೆ.
1994 ರಿಂದ ಹೊಸ ವರ್ಷದ ಮೊದಲ ದಿನದಂದು ಲಡ್ಡು ಪ್ರಸಾದ ವಿತರಿಸಲಾಗುತ್ತಾ ಬರಲಾಗುತ್ತಿದೆ. ಅದೇ ರೀತಿ ಈ ವರ್ಷವೂ ಎರಡು ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಲಡ್ಡು ವಿತರಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ. ಜನವರಿ 1 ರಂದು ಬೆಳಿಗ್ಗೆ 4 ರಿಂದ ಪ್ರಾರಂಭವಾಗುವ ಲಡ್ಡೂಗಳ ವಿತರಣೆ ಕಾರ್ಯ ಮಧ್ಯರಾತ್ರಿ 12 ರವರೆಗೆ ನಡೆಯಲಿದೆ ಎಂದು ಅವರು ಹೇಳಿದರು.