NationalPolitics

ರಾಹುಲ್‌ ಗಾಂಧಿ ಮತ್ತೆ ಪಾದಯಾತ್ರೆ; ಜನವರಿ 14ರಿಂದ ʻಭಾರತ ನ್ಯಾಯ ಯಾತ್ರೆʼ

ನವದೆಹಲಿ; ವರ್ಷದ ಹಿಂದೆ ಭಾರತ್‌ ಜೋಡೋ ಹೆಸರಿನಲ್ಲಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈಗ ಮತ್ತೊಂದು ಯಾತ್ರೆಗೆ ಸಜ್ಜಾಗುತ್ತಿದ್ದಾರೆ. ಈ ಬಾರಿ ಈ ಯಾತ್ರೆಗೆ ʻಭಾರತ ನ್ಯಾಯ ಯಾತ್ರೆʼ ಎಂದು ಹೆಸರಿಟ್ಟಿದ್ದಾರೆ. 

ಜನವರಿ 14ರಿಂದ ಮಣಿಪುರದಿಂಧ ರಾಹುಲ್‌ಗಾಂಧಿ ಪಾದಯಾತ್ರೆ ಆರಂಭಿಸಲಿದ್ದಾರೆ. ಈ ಬಾರಿ ಅವರು ಮಣಿಪುರದಿಂದ ಮುಂಬೈವರೆಗೆ ಪಾದಯಾತ್ರೆ ಮಾಡಲಿದ್ದಾರೆ. ಸುಮಾರು 6200 ಕಿಲೋ  ಮೀಟರ್‌ಗಳ ಪಾದಯಾತ್ರೆ ಇದಾಗಿದೆ. ಇದು ಲೋಕಸಭಾ ಚುನಾವಣೆಗೆ ಮುನ್ನ ಅಂದರೆ, ಮಾರ್ಚ್‌ 20ಕ್ಕೆ ಮುಕ್ತಾಯವಾಗಲಿದೆ.

14 ರಾಜ್ಯಗಳ 85 ಜಿಲ್ಲೆಗಳಲ್ಲಿ ಈ ಯಾತ್ರೆ ಸಾಗಲಿದೆ. ಮಣಿಪುರ, ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಛತ್ತಿಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ ಹಾಗೂ ಮಹಾರಾಷ್ಟ್ರಗಳಲ್ಲಿ ಪಾದಯಾತ್ರೆ ನಡೆಯುತ್ತದೆ. ರಾಹುಲ್‌ ಗಾಂಧಿಗೆ ಹಲವು ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಸಾಥ್‌ ನೀಡಲಿದ್ದಾರೆ.

ರಾಹುಲ್‌ ಗಾಂಧಿಯವರು 2022ರ ಸೆಪ್ಟೆಂಬರ್‌ನಲ್ಲಿ ಕನ್ಯಾಕುಮಾರಿಯಿಂದ ಭಾರತ್‌ ಜೋಡೋ ಯಾತ್ರೆ ಶುರು ಮಾಡಿದ್ದರು. ಐದು ತಿಂಗಳ ಕಾಲ ನಡೆದ ಯಾತ್ರೆ ಶ್ರೀನಗರದಲ್ಲಿ ಮುಕ್ತಾಯವಾಗಿತ್ತು.

 

Share Post