Politics

ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್‌ ರದ್ದು ಮಾಡಿ; ಪ್ರಧಾನಿಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರು; ಪ್ರಜ್ವಲ್‌ ರೇವಣ್ಣ ವಿರುದ್ಧದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.. ಈ ಮೂಲಕ ಪ್ರಕರಣವನ್ನು ರಾಜ್ಯ ಸರ್ಕಾಋ ತುಂಬಾ ಸೀರಿಯಸ್ಸಾಗಿ ತೆಗೆದುಕೊಂಡಂತೆ ಕಾಣುತ್ತಿದೆ..

ಪ್ರಜ್ವಲ್‌ ವಿದೇಶಕ್ಕೆ ಹಾರಲು ರಾಜ್ಯ ಸರ್ಕಾರ ಯಾಕೆ ಅವಕಾಶ ಕೊಡ್ತು ಎಂದು ಬಿಜೆಪಿಯವರು ಪ್ರಶ್ನಿಸುತ್ತಿದ್ದಾರೆ.. ಆದ್ರೆ ಸಿಎಂ ಸಿದ್ದರಾಮಯ್ಯ ಅವರು ವೀಸಾ ಕೊಟ್ಟಿದ್ದು ಕೇಂದ್ರ ಸರ್ಕಾರ ಅಲ್ಲವೇ ಎಂದು ಬೆಳಗ್ಗೆ ಪ್ರಶ್ನೆ ಮಾಡಿದ್ದರು.. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ..

ಇದನ್ನು ಓದಿ; Breaking; ಕೊನೆಗೂ ಮೌನ ಮುರಿದ ಪ್ರಜ್ವಲ್‌ ರೇವಣ್ಣ; ಹಾಸನ ಸಂಸದನ ಫಸ್ಟ್‌ ರಿಯಾಕ್ಷನ್‌ ಇದು!

ಪ್ರಕರಣದಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.. ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಲಾಗಿದೆ.. ವಿದೇಶದಲ್ಲಿರುವ ಪ್ರಜ್ವಲ್‌ ವಿಚಾರಣೆಗೆ ಹಾಜರಾಗಬೇಕು.. ಅವರನ್ನು ಭಾರತಕ್ಕೆ ಕರೆಸಬೇಕು.. ಹೀಗಾಗಿ ಕೇಂದ್ರ ಸರ್ಕಾರ ಪ್ರಜ್ವಲ್‌ ಅವರ ಪಾಸ್‌ ಪೋರ್ಟ್‌ ರದ್ದು ಮಾಡಬೇಕು ಎಂದೂ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ..

ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಹಾಗೂ ಹಾಲಿ NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವಿದೆ.. ನಮ್ಮ ಸರ್ಕಾರ ಸಂಬಂಧ ತನಿಖೆ ನಡೆಸಲು ಎಸ್‌ಐಟಿ ರಚನೆ ಮಾಡಿದೆ..  ಆದ್ರೆ ನಿಮ್ಮ ಎನ್‌ಡಿ ಅಭ್ಯರ್ಥಿ ಏಪ್ರಿಲ್‌ 27ರಂದು ವಿದೇಶಕ್ಕೆ ಹೋಗಿದ್ದಾರೆ.. ರಾಜತಾಂತ್ರಿಕ ಪಾಸ್‌ ಪೋರ್ಟ್‌ನಲ್ಲಿ ಆತ ವಿದೇಶ ಪ್ರವಾಸದಲ್ಲಿದ್ದಾನೆ..

ಇದನ್ನೂ ಓದಿ; ಪ್ರಜ್ವಲ್‌ ರೇವಣ್ಣರನ್ನು ವಿದೇಶಕ್ಕೆ ಕಳುಸಿದ್ದೇ ದೇವೇಗೌಡರು; ಸಿದ್ದರಾಮಯ್ಯ!

ನಾವು ಪ್ರಜ್ವಲ್‌ ವಿರುದ್ಧದ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಒಪ್ಪಿಸಿದ್ದು, ಅಧಿಕಾರಿಗಳು ಹಗಳಿರುಳೂ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.. ಈ ಸಂದರ್ಭದಲ್ಲಿ ಪ್ರಜ್ವಲ್‌ ಅವರನ್ನು ಭಾರತಕ್ಕೆ ಕರೆತರುವುದು ಅಗತ್ಯವಾಗಿದೆ.. ಹೀಗಾಗಿ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸಲು ಮತ್ತು ಭಾರತ ಸರ್ಕಾರದ ರಾಜತಾಂತ್ರಿಕ ಮತ್ತು ಪೊಲೀಸ್ ಚಾನೆಲ್‌ಗಳನ್ನು ಬಳಸಿಕೊಂಡು ಅಂತಹ ಇತರೆ ಕ್ರಮಗಳನ್ನು ಕೈಗೊಳ್ಳಲು ವಿದೇಶಾಂಗ ವ್ಯವಹಾರಗಳು ಮತ್ತು ಗೃಹ ವ್ಯವಹಾರಗಳ ಸಚಿವಾಲಯಗಳನ್ನು ಒತ್ತಾಯಿಸಲು ನಾವು ಒತ್ತಾಯಿಸುತ್ತೇವೆ ಎಂದು ಸಿದ್ದರಾಮಯ್ಯ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ..

 

Share Post