CrimeDistricts

ಅವಿವಾಹಿತನ ಜತೆ ಮಹಿಳೆಯ ಅಕ್ರಮ ಸಂಬಂಧ; ನೇಣಿಗೆ ಶರಣಾದ ಜೋಡಿ

ಕೋಲಾರ; ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮನೆಯಿಂದ ಓಡಿಹೋಗಿದ್ದ ವಿವಾಹಿತ ಮಹಿಳೆ ಹಾಗೂ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಎಸ್‌.ಜೀಡಮಾಕಲಪಪ್ಪಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮೂವತ್ತೈದು ವರ್ಷದ ಅನಸೂಯ ಹಾಗೂ ಇಪ್ಪತ್ತೆಂಟು ವರ್ಷದ ವಿಜಯ್‌ಕುಮಾರ್‌ ಆತ್ಮಹತ್ಯೆ ಮಾಡಿಕೊಂಡವರು. ಅನಸೂಯಾಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ವಿಜಯ್‌ ಕುಮಾರ್‌ ಅವಿವಾಹಿತವಾಗಿದ್ದು, ಅನಸೂಯಾ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇಬ್ಬರೂ ಎರಡು ತಿಂಗಳ ಹಿಂದೆ ಊರು ಬಿಟ್ಟುಹೋಗಿದ್ದರು.

ಇದೀಗ ಕಳೆದ ರಾತ್ರಿ ಇಬ್ಬರೂ ಗ್ರಾಮಕ್ಕೆ ಬಂದಿದ್ದು, ಗ್ರಾಮದ ಹೊರವಲಯದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಸೂಯಾ ಮಂಜುನಾಥ್‌ ಎಂಬಾತನನ್ನು ಮದುವೆಯಾಗಿದ್ದಳು. ಆಕೆಗೆ ಇಬ್ಬರು ಮಕ್ಕಳೂ ಇದ್ದಾರೆ. ಹೀಗಿದ್ದರೂ ಗ್ರಾಮದ ಯುವಕ ವಿಜಯ್‌ ಕುಮಾರ್‌ ಜೊತೆ ಸಂಬಂಧ ಇಟ್ಟುಕೊಂಡು ಈಗ ನೇಣಿಗೆ ಕೊರಳೊಡ್ಡಿದ್ದಾರೆ.

 

Share Post