ದೆಹಲಿಯಲ್ಲಿ INDIA ಒಕ್ಕೂಟದ 4ನೇ ಸಭೆ; ಸೀಟು ಹಂಚಿಕೆ ಚರ್ಚೆಯಾಗುತ್ತಾ..?
ನವದೆಹಲಿ; ಡಿಸೆಂಬರ್ 6ರಂದು ದೆಹಲಿಯಲ್ಲಿ INDIA ಒಕ್ಕೂಟದ ಸಭೆ ಕರೆಯಲಾಗಿತ್ತು. ಆದ್ರೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ಮಾಡಿದ್ದರಿಂದಲೋ ಏನೋ ಸಭೆಯನ್ನು ಮುಂದೂಡಲಾಗಿತ್ತು. ಇದೀಗ ಇವತ್ತು ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಸಭೆಯುತ್ತಿವೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಈ ಸಭೆ INDIA ಒಕ್ಕೂಟದ ಪಕ್ಷಗಳ ಪಾಲಿಗೆ ಮಹತ್ವದ್ದೆನಿಸಿದೆ.
INDIA ಒಕ್ಕೂಟದ ನಾಲ್ಕನೇ ಸಭೆ ಇದು. ಈ ಸಭೆಯಲ್ಲಿ ಸೀಟು ಹೊಂದಾಣಿಕೆ, ಪ್ರಧಾನಿ ಅಭ್ಯರ್ಥಿ ಆಯ್ಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಪ್ರಧಾನಿ ಅಭ್ಯರ್ಥಿ ರೇಸ್‌ನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್ ನಡುವೆ ಪೈಪೋಟಿ ಇದೆ. ಈ ಕಾರಣಕ್ಕಾಗಿಯೇ INDIA ಮಿತ್ರಿಪಕ್ಷಗಳಲ್ಲಿ ಇನ್ನೂ ಒಗ್ಗಟ್ಟು ಮೂಡಿಲ್ಲ. ಇಂದಿನ ಸಭೆಯಲ್ಲಿ INDIA ಮಿತ್ರಕೂಟದ ಸ್ಥಿತಿ ಏನು ಅನ್ನೋದು ಸ್ಪಷ್ಟವಾಗಿ ಗೊತ್ತಾಲಿದೆ.