ಸಂಸತ್‌ನಲ್ಲಿ ಭದ್ರತಾಲೋಪ ಪ್ರಕರಣ; ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಪೊಲೀಸ್ ವಿಶೇಷ ಘಟಕ !
ನವದೆಹಲಿ; ಕಳೆದ ಬುಧವಾರ ಸಂಸತ್ತಿನಲ್ಲಿ ಭದ್ರತಾಲೋಪವಾಗಿತ್ತು. ಇಬ್ಬರು ಯುವಕರು ಪ್ರೇಕ್ಷಕರ ಗ್ಯಾಲರಿಯಿಂದ ಕಲಾಪಕ್ಕೆ ಜಿಗಿದ್ದಿದ್ದರು. ಈ ವೇಳೆ ಅವರು ಕಲರ್ ಗ್ಯಾಸ್ ಸಿಡಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ದೆಹಲಿ ಪೊಲೀಸರ ವಿಶೇಷ ಕೋಶ ಘಟಕಗಳನ್ನ ರಚನೆ ಮಾಡಲಾಗಿದೆ.
ಕರ್ನಾಟಕ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರಗಳಲ್ಲಿ ಈ ಘಟಕಗಳನ್ನು ತೆರೆಯಲಾಗಿದೆ. ಆರು ಆರೋಪಿಗಳನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಅದರಲ್ಲೊಬ್ಬನಾದ ಮನೋರಂಜನ್ ಮೈಸೂರಿನವನಾಗಿದ್ದಾನೆ. ಇನ್ನು ಈ ಪ್ರಕರಣದ ತನಿಖೆಗೆ 50 ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದೆ.
ಬಂಧಿತ ಆರೋಪಿಗಳ ಡಿಜಿಟಲ್ ಬಳಕೆ, ಅವರ ಬ್ಯಾಂಕಿಂಗ್ ಮಾಹಿತಿ, ಪೂರ್ವಾಪರಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಇನ್ನು ಎಲ್ಲಾ ಆರೋಪಿಗಳನ್ನು ಬೇರೆ ಬೇರೆ ಕಡೆ ಇಟ್ಟು ವಿಚಾರಣೆ ನಡೆಸಲಾಗುತ್ತಿದೆ.