CrimeHealthInternational

ದಾವೂದ್‌ ಇಬ್ರಾಹಿಂ ಮೃತಪಟ್ಟು 1 ಗಂಟೆಯಾಯಿತು; ವೈರಲ್‌ ಆಗ್ತಿವೆ ಟ್ವೀಟ್‌ಗಳು!

ಕರಾಚಿ; ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ ಪಾಕಿಸ್ತಾನದಲ್ಲಿ ವಿಷ ಪ್ರಾಶಣ ಮಾಡಲಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಬಂದಿತ್ತು. ಇದೀಗ ದಾವೂದ್‌ ಇಬ್ರಾಹಿಂ ಮೃತಪಟ್ಟು ಒಂದು ಗಂಟೆಯಾಗಿದೆ ಎಂದು ಮಾಹಿತಿಯ ಟ್ವೀಟ್‌ಗಳು ವೈರಲ್‌ ಆಗುತ್ತಿವೆ. ಪೊಲಿಟಿಕಲ್​ ಮಸ್ತಿ ಎಂಬ ಟ್ವಿಟ್ಟರ್​ ಖಾತೆಯಲ್ಲಿ ಈ ರೀತಿಯಾಗಿ ಟ್ವೀಟ್‌ ಮಾಡಲಾಗಿದೆ.

ಇನ್ನೂ ಹಲವರು ಇದೇ ರೀತಿಯ ಟ್ವೀಟ್‌ಗಳನ್ನು ಮಾಡಿದ್ದಾರೆ. ಹೀಗಾಗಿ ದಾವೂದ್‌ ಇಬ್ರಾಹಿಂ ಆರೋಗ್ಯ ಸ್ಥಿತಿ ಬಗ್ಗೆ ಗೊಂದಲ ಉಂಟಾಗಿದೆ. ಆತನ ಬದುಕಿದ್ದಾನಾ..? ಇಲ್ಲ ಸತ್ತಿದ್ದಾನಾ..? ಎಂಬುದರ ಬಗ್ಗೆ ಸ್ಪಷ್ಟತೆ ಸಿಗುತ್ತಿಲ್ಲ. ಟ್ವಟಿರ್‌ನಲ್ಲಿ ಕೆಲವರು ವಿಷ ಪ್ರಾಶಣದಿಂದ ದಾವೂದ್‌ ಸಾವನ್ನಪ್ಪಿದ್ದಾನೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Share Post