Bengaluru

RSS ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕರಾಗಿ ಉಮಾಪತಿ

RSS ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕರಾಗಿ ಉಮಾಪತ

ಬೆಂಗಳೂರು; ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕರ್ನಾಟಕ ದಕ್ಷಿಣ ಪ್ರಾಂತದ ನೂತನ ಪ್ರಾಂತ ಸಂಘಚಾಲಕರಾಗಿ ಜಿ.ಎಸ್. ಉಮಾಪತಿ ಅವರನ್ನು ನೇಮಕ ಮಾಡಲಾಗಿದೆ.

 

 ಉಮಾಪತಿಯವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಆಡನೂರು ಗ್ರಾಮದವರು‌. ದಾವಣಗೆರೆಯಲ್ಲಿ ಬಿ.ಇ. ಇಂಜಿನಿಯರಿಂಗ್ ಮಾಡಿರುವ ಅವರು ಹಲವು ಸಂಸ್ಥೆಗಳಲ್ಲಿ ದುಡಿದಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಸಂಘದ ಸ್ವಯಂಸೇವಕರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಬಳ್ಳಾರಿ ಜಿಲ್ಲೆಯ ಕಾರ್ಯವಾಹರಾಗಿ, ದಾವಣಗೆರೆ ಜಿಲ್ಲೆಯ ವ್ಯವಸ್ಥಾ ಪ್ರಮುಖರಾಗಿ, ದಾವಣಗೆರೆ ಜಿಲ್ಲಾ ಸಂಘಚಾಲಕರಾಗಿ, ಶಿವಮೊಗ್ಗ ವಿಭಾಗದ ವಿಭಾಗ ಸಂಘಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಸ್ತುತ ಕರ್ನಾಟಕ ದಕ್ಷಿಣ ಪ್ರಾಂತದ ನೂತನ ಪ್ರಾಂತ ಸಂಘಚಾಲಕರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

 

ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರದ ಸಂಘಚಾಲಕರಾಗಿ ಮಿಲಿಂದ್ ಗೋಖಲೆ ಹಾಗೂ ಮಂಗಳೂರು ವಿಭಾಗದ ವಿಭಾಗ ಸಂಘಚಾಲಕರಾಗಿ ಡಾ. ನಾರಾಯಣ ಶೆಣೈ ಜವಾಬ್ದಾರಿ ನಿರ್ವಹಿಸಲಿದ್ದಾರೆ.

Share Post