BengaluruCinema

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ನಿವಾಸಕ್ಕೆ ತೆಲುಗು ಸ್ಟಾರ್‌ ನಾನಿ ಭೇಟಿ

ಬೆಂಗಳೂರು; ತೆಲುಗಿನ ಖ್ಯಾತ ನಟ ನಾನಿ ಅವರು ಬೆಂಗಳೂರಿನ ಶಿವರಾಜ್‌ಕುಮಾರ್‌ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ನಾನಿ ಅವರ ಹೊಸ ಸಿನಿಮಾ ʻಹಾಯ್‌ ನಾನ್ನʼ ಚಿತ್ರ ಡಿಸೆಂಬರ್‌ 7ರಂದು ಬಿಡುಗಡೆಯಾಗಿದೆ. ಅದರ ಪ್ರಚಾರದಲ್ಲಿರುವ ನಾನಿ, ಶಿವರಾಜ್‌ಕುಮಾರ್‌ ಅವರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. 

ಪರಭಾಷಾ ನಟರು ಕೂಡಾ ಶಿವರಾಜ್‌ಕುಮಾರ್‌ ಅವರ ಮೇಲೆ ಪ್ರೀತಿ ಇದೆ. ತೆಲುಗು, ತಮಿಳಿನ ನಟರು ಯಾರೇ ಬೆಂಗಳೂರಿಗೆ ಬಂದರೂ ಶಿವರಾಜ್‌ಕುಮಾರ್‌ ಅವರನ್ನು ಭೇಟಿಯಾಗುತ್ತಾರೆ. ಅದೇ ರೀತಿ ನಾನಿ ಅವರ ಜೊತೆ ಶಿವರಾಜ್‌ಕುಮಾರ್‌ಗೆ ಒಳ್ಳೆಯ ಗೆಳೆತನವಿದೆ. ಈ ಕಾರಣಕ್ಕಾಗಿ ನಾನಿ ಅವರು ಶಿವರಾಜ್‌ಕುಮಾರ್‌ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶಿವರಾಜ್‌ಕುಮಾರ್‌ ಅವರು ನಾನಿಯವರ ಹೊಸ ಚಿತ್ರ ಹಾಯ್‌ ನಾನ್ನಗೆ ಆಲ್‌ ದ ಬೆಸ್ಟ್‌ ಹೇಳಿದ್ದಾರೆ.

ಗೀತಾ ಶಿವರಾಜ್​ಕುಮಾರ್, ಸಚಿವ ಮಧು ಬಂಗಾರಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

Share Post