Cinema

ರವಿಚಂದ್ರನ್ ‘ದೃಶ್ಯ 2’ ತೆರೆಗೆ ಬರುವುದಕ್ಕೂ ಮೊದಲು ಮತ್ತೊಮ್ಮೆ ರಿಲೀಸ್ ಆಗ್ತಿದೆ ‘ದೃಶ್ಯ’

ಬೆಂಗಳೂರು : ‘ದೃಶ್ಯ’ ಸಿನಿಮಾ ತೆರೆಗೆ ಬಂದು 7 ವರ್ಷ ಕಳೆದಿದೆ. ಎರಡನೇ ಪಾರ್ಟ್​ ನೋಡುವುದಕ್ಕೂ ಮುನ್ನ ಮೊದಲ ಪಾರ್ಟ್​ ನೋಡಬೇಕು ಎಂದು ಸಿನಿಪ್ರಿಯರು ಬಯಸೋದು ಸಾಮಾನ್ಯ. ಈ ಕಾರಣಕ್ಕೆ ಚಿತ್ರತಂಡ ‘ದೃಶ್ಯ 2’ಗೂ ಮೊದಲು ‘ದೃಶ್ಯ’ ಸಿನಿಮಾವನ್ನು ಪ್ರದರ್ಶನ ಮಾಡುತ್ತಿದೆ. ‘ದೃಶ್ಯ’ ಮತ್ತು ‘ದೃಶ್ಯ 2’ ಚಿತ್ರದ ಕಥೆಗೆ ಲಿಂಕ್​ ಇದೆ. ಈ ಕಾರಣಕ್ಕೆ ಸಿನಿ ಪ್ರಿಯರಿಗೆ ಕಥೆ ನೆನಪು ಮಾಡಿಕೊಳ್ಳೋಕೆ ಒಂದೊಳ್ಳೆಯ ಅವಕಾಶ ಇದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇಂದಿನಿಂದ ಕೆಲ ಮಲ್ಟಿಪ್ಲೆಕ್ಸ್​ಗಳಲ್ಲಿ ‘ದೃಶ್ಯ 2’ ಪ್ರದರ್ಶನ ಕಾಣುತ್ತಿದೆ. ಬುಕ್ ಮೈ ಶೋನಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗಿದೆ. ವೀಕೆಂಡ್​ ಆಗಿರುವುದರಿಂದ ಈ ಸಿನಿಮಾ ನೋಡೋಕೆ ಪ್ರೇಕ್ಷಕರು ಬರಹುದು ಎನ್ನುವ ನಿರೀಕ್ಷೆ ಇದೆ. ಎಂಎಸ್​ಆರ್​ ಎಲಿಮೆಂಟ್ಸ್​ ಮಾಲ್​ನಲ್ಲಿರುವ ಪಿವಿಆರ್ ರೆಗಲಿಯಾದಲ್ಲಿ ಬೆಳಗ್ಗೆ 11.55ಕ್ಕೆ ಶೋ ಇದೆ.  ಒರಾಯನ್​ ಮಾಲ್​ನಲ್ಲಿ ಮಧ್ಯಾಹ್ನ 3:30ಕ್ಕೆ ಶೋ ಇದೆ.  ETA ಮಾಲ್​ನಲ್ಲಿ 6.30ಕ್ಕೆ ಶೋ ಆಯೋಜಿಸಲಾಗಿದೆ. ಮಲ್ಲೇಶ್ವರದ ಐನಾಕ್ಸ್​ನಲ್ಲಿ ರಾತ್ರಿ 9.45ಕ್ಕೆ ‘ದೃಶ್ಯ’ ಶೋ ಇದೆ.

 

Share Post