ಆಲಿಕಲ್ಲು ಮಳೆಗೆ ಗುಜರಾತ್ ತತ್ತರ; 24 ಮಂದಿ ಬಲಿ!
ಗುಡುಗು ಸಹಿತ ಭಾರೀ ಆಲಿಕಲ್ಲು ಮಳೆಗೆ ಗುಜರಾತ್ನಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. 24 ಮಂದಿಯಲ್ಲಿ 18 ಮಂದಿ ಸಿಡಿಲಿನಿಂದಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಆರಂಭವಾದ ಈ ಆಲಿಕಲ್ಲು ಮಳೆ ಈಗಲೂ ಮುಂದುವರಿದಿದೆ. ಆಲಿಕಲ್ಲು ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಹೆಚ್ಚಿನ ಸಂಖ್ಯೆಯ ಜಾನುವಾರುಗಳು ಸಹ ಸಾವನ್ನಪ್ಪಿವೆ.
ಈ ದಿಢೀರ್ ಆಲಿಕಲ್ಲು ಮಳೆಯಿಂದಾಗಿ ಜನರು ತೀವ್ರ ತೊಂದರೆ ಅನುಭವಿಸಿದರು. ಚಳಿಗಾಲದಲ್ಲಿ ಗುಜರಾತ್ನಲ್ಲಿ ಸಾಮಾನ್ಯವಾಗಿ ಆಲಿಕಲ್ಲು ಮಳೆ ಅಪರೂಪ. ಆದರೆ, ಗುಜರಾತ್ ಮೇಲೆ ಮೂರು ರೀತಿಯ ಹವಾಮಾನ ಪರಿಸ್ಥಿತಿಗಳು ಈ ಬೆಳವಣಿಗೆಗೆ ಕಾರಣವಾಗಿವೆ ಎಂದು ಗುಜರಾತ್ ಹವಾಮಾನ ಇಲಾಖೆ ಅಧಿಕಾರಿ ಮನೋರಮಾ ಮೊಹಂತಿ ಬಹಿರಂಗಪಡಿಸಿದ್ದಾರೆ.
ಅರಬ್ಬಿ ಸಮುದ್ರದಿಂದ ಬೀಸುತ್ತಿರುವ ಪೂರ್ವ ಮಾರುತಗಳು, ಪಶ್ಚಿಮ ಹಿಮಾಲಯದ ಮೇಲೆ ಪಶ್ಚಿಮದ ಅಡೆತಡೆಗಳು ಮತ್ತು ದಕ್ಷಿಣ ಗುಜರಾತ್ನ ಮೇಲೆ ಚಂಡಮಾರುತದ ಪರಿಚಲನೆಯು ಗುಜರಾತ್ನ ಮೇಲೆ ಏಕಕಾಲದಲ್ಲಿ ಪರಿಣಾಮ ಬೀರುತ್ತಿದೆ ಎಂದು ಮನೋರಮಾ ಬಿಬಿಸಿಗೆ ವಿವರಿಸಿದರು.