ದೇಶದಲ್ಲಿ ಮೂರನೇ ಒಮಿಕ್ರಾನ್ ಪ್ರಕರಣ ಪತ್ತೆ
ಜಾಮ್ನಗರ್ (ಗುಜರಾತ್): ಗುಜರಾತ್ನಲ್ಲೂ ಒಮಿಕ್ರಾನ್ ಪ್ರಕರಣವೊಂದು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಜಿಂಬಾಬ್ವೆಯಿಂದ ಜಾಮ್ನಗರ್ಗೆ ಬಂದಿದ್ದ ಹಿರಿಯ ವ್ಯಕ್ತಿಯ ಪರೀಕ್ಷೆಯಲ್ಲಿ ಒಮಿಕ್ರಾನ್ ಸೋಂಕು ಇರುವುದು ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಎರಡು ದಿನಗಳ ನಂತರ ಮೂರನೇ ಪ್ರಕರಣ ಗುಜರಾತ್ನಲ್ಲಿ ಪತ್ತೆಯಾಗಿದೆ. ಒಟ್ಟು ನಾಲ್ಕು ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದಿದ್ದು, ಇದರಲ್ಲಿ ಒಬ್ಬರಿಗೆ ಮಾತ್ರ ಒಮಿಕ್ರಾನ್ ಸೋಂಕು ಇದೆ ಎಂದು ಗೊತ್ತಾಗಿದೆ. ಅವರೆಲ್ಲರನ್ನೂ ಜಾಮ್ನಗರದ ಡೆಂಟಲ್ ಕಾಲೇಜಿನಲ್ಲಿ ಐಸೋಲೇಷನ್ ಮಾಡಲಾಗಿದೆ.
ಇನ್ನು ಒಮಿಕ್ರಾನ್ ಕೇಸ್ ಪತ್ತೆಯಾಗುತ್ತಿದ್ದಂತೆ ಸಿಎಂ ಭೂಪೇಂದ್ರ ಯಾದವ್ ತುರ್ತು ಸಭೆ ಕರೆದು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.