BengaluruHealth

ದೇಶದಲ್ಲಿ ಹೆಚ್ಚಾದ H3N2 ಸೋಂಕು; ಸುಧಾಕರ್‌ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರು; ಕೊರೊನಾ ನಂತರ ಇನ್ಫ್ಲುಯೆಂಜಾ H3N2 ಸೋಂಕು ಭೀತಿ ಮೂಡಿಸುತ್ತಿದೆ. ದೇಶದ ಹಲವೆಡೆ ಈ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಬಗ್ಗೆ ಇಂದು ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತಿದೆ. ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ.

ದೇಶದ ಹಲವು ಭಾಗಗಳಲ್ಲಿ ಜನರು ಬಿಟ್ಟೂಬಿಡದೆ ಜ್ವರದಿಂದ ಬಳಲುತ್ತಿದ್ದಾರೆ. ದೀರ್ಘಕಾಲದ ಅನಾರೋಗ್ಯ ಕಾಡುತ್ತಿದ್ದು, ಕೆಮ್ಮಿನಿಂದ ಜನರು ನರಳುತ್ತಿದ್ದಾರೆ.  ಅನೇ ಕಡೆಗಳಲ್ಲಿ ಜ್ವರ ಹಾಗೂ ಫ್ಲೂ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ.  ಇನ್‌ಫ್ಲೂಯೆಂಜಾ ಎ ಉಪವಿಧದ ಎಚ್‌3ಎನ್2 ವೈರಸ್  ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಕಳೆದ ಮೂರು ತಿಂಗಳಿಂದ ಈ ಸೋಂಕು ಜಾಸ್ತಿಯಾಗುತ್ತಿದೆ. ರಾಜ್ಯದಲ್ಲೂ ಈ ಸೋಂಕು ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಂಚೆಯೇ ಜಾಗ್ರತೆ ವಹಿಸಲಾಗುತ್ತಿದೆ. ಸಭೆಯಲ್ಲಿ ಹಿರಿಯ ತಜ್ಞ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದು, ಸೋಂಕಿನ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸೋಂಕು ಹರಡದಂತೆ ಯಾವುದೆಲ್ಲಾ ಮುಂಜಾಗ್ರತೆ ಕೈಗೊಳ್ಳಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

Share Post