CrimeNational

ಈ ಕಾಮಾಂಧ ಪ್ರಿನ್ಸಿಪಾಲ್‌ 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನಂತೆ!

ಚಂಡೀಗಢ; ಪಾಠ ಹೇಳುವ ಗುರುಗಳೇ ಮಕ್ಕಳಿಗೆ ಯಮಕಿಂಕರರಾಗುತ್ತಿದ್ದಾರೆ. ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಲ್ಲೊಬ್ಬ 55 ವರ್ಷ ವಯಸ್ಸಿನ ಪ್ರಾಂಶುಪಾಲ ವಿದ್ಯಾರ್ಥಿನಿಯರ ಪಾಲಿಗೆ ಕಾಮ ಪಿಶಾಚಿಯಾಗಿದ್ದಾನೆ. ಈತನ ವಿರುದ್ಧ 142 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ದೂರು ಕೊಟ್ಟಿದ್ದಾರೆ.

ಹರಿಯಾಣದ ಜಿಂದ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲನೇ ಈ ಕೃತ್ಯ ಎಸಗಿರುವ ಆರೋಪಿ. ಮೊದಲಿಗೆ 60 ವಿದ್ಯಾರ್ಥಿನಿಯರು ಈತನ ವಿರುದ್ಧ ತಿರುಗಿಬಿದ್ದು ದೂರು ಕೊಟ್ಟಿದ್ದರು. ಇದೀಗ 142 ವಿದ್ಯಾರ್ಥಿನಿಯರು ಧೈರ್ಯ  ಮಾಡು ದೂರು ನೀಡಿದ್ದಾರೆ. ವಿದ್ಯಾರ್ಥಿನಿಯರನ್ನು ತನ್‌ ಕಚೇರಿಗೆ ಕರೆಸಿಕೊಂಡು ಆತ ಲೈಂಗಿಕ ಹಿಂಶೆ ನೀಡುತ್ತಿದ್ದ ಎಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

(ಚಿತ್ರ ಸಾಂದರ್ಭಿಕ)

Share Post