BengaluruPolitics

ಸಿಎಸ್‌ಆರ್‌ ಫಂಡ್‌ ಆದ್ರೆ ಲಿಸ್ಟ್‌ ಬಿಪಿಒ ಕಳುಹಿಸಿರಬೇಕಲ್ಲ; ಯತೀಂದ್ರ ವಿಚಾರದ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು; ಮಾಜಿ ಶಾಸಕ ಯತೀಂದ್ರ ಅವರು ಸಿಎಸ್​ಆರ್ ಫಂಡ್ ಬಗ್ಗೆ ನನ್ನ ಹಾಗೂ ಮಹದೇವ್‌ ಜೊತೆ ಮಾತನಾಡಿದ್ದು ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಆದ್ರೆ ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮಾತನಾಡಿದ್ದು ರಾಜ್ಯದ CSR ಫಂಡಿನದ್ದೋ? ಅಥವಾ ವರುಣ ಕ್ಷೇತ್ರದ್ದೋ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ವರುಣಾದ ಸಿಎಸ್​ಆರ್ ಫಂಡ್ ಆಗಿದ್ದರೆ ವರುಣ ಕ್ಷೇತ್ರದ ಬಿಇಓ ಕಳಿಸಿರಬೇಕಲ್ಲ. ಮೈಸೂರು ಡಿಡಿಪಿಐ ಬಳಿ ಲಿಸ್ಟ್ ಇರಬೇಕಲ್ಲ. ಅದನ್ನು ಹೊರಗಿಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಪಾಪ ಸಿಎಂ ಕಚೇರಿಗೆ ಬಂದು ಅದನ್ನ ಮಗನಿಗೆ ಕೇಳಿಕೊಂಡು ಮಾಡಬೇಕಾ? ಇಷ್ಟು ಭಂಡತನ ಬೇಡ. ಹಿಂದೆ ನಿಮ್ಮ ಪ್ರಾಮಾಣಿಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಈಗ ಹಳೆಯ ಸಿದ್ದರಾಮಯ್ಯ ಅಲ್ಲ ಅಂತ ನಿಮ್ಮವರೇ ಹೇಳುತ್ತಿದ್ದಾರೆ ಎಂದರು.

ಮಾಜಿ ಶಾಸಕ ಡಾ.ಯತೀಂದ್ರಗೆ ಫೋನ್ ಕರೆ ಮಾಡಿದ್ದು ಯಾರು? ಹಲೋ ಅಪ್ಪ ಅಂತಾ ಯತೀಂದ್ರ ಹೇಳಿದ್ದು ಯಾರಿಗೆ? ವಿವೇಕಾನಂದ ಯಾರು?, ನಾಲ್ಕೈದು ಲಿಸ್ಟ್​ ಕೊಟ್ಟಿದ್ದು ಏನು? ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಫೋನ್ ಮಾಡಿ ಕೇಳಿದ್ಯಾರು? ಅದು ಸಿಎಂ ಪರಿಹಾರ ನಿಧಿಯ ಹೆಸರುಗಳು? ಒಬ್ಬ ಮುಖ್ಯಮಂತ್ರಿ ಫೋನ್ ಮಾಡಿ ಲಿಸ್ಟ್ ಬಗ್ಗೆ ಮಾತಾಡುತ್ತಾರೆ. ಯಾರು ಮಹದೇವ?, ಯಾರು ಲೇಬರ್​ ಇನ್ಸ್​​ಪೆಕ್ಟರ್​ ಅವನು? ಆರ್​.ಮಹದೇವ್​ ಅವರದ್ದು ವಿಶೇಷ ಕರ್ತವ್ಯ ಏನು? ಸಾರ್ವಜನಿಕವಾಗಿ ಈ ರೀತಿಯಾದರೆ 4 ಗೋಡೆ ಮಧ್ಯೆ ಇನ್ನೇನು ಆಗುತ್ತಿದೆ? ಸಿಎಂ ಕೆಲಸ ಅಂದರೆ ಮಗನಿಗೆ ಫೋನ್​ ಮಾಡಿ ಕೇಳಬಹುದಾ? ಸಾರ್ವಜನಿಕರ ಹಣ ಲೂಟಿ ಮಾಡಿ ಎಂದು ಅಧಿಕಾರ ಕೊಟ್ಟಿದ್ದಾರಾ? ಫೋನ್ ಮಾಡಿ ಹೇಳಿದ್ದಾರಲ್ಲ ಅದರ ದಾಖಲೆ ಬಿಡುಗಡೆ ಮಾಡಿ. ಯಾವ ಶಾಲೆಗಳ ಸಿಎಸ್​​ಆರ್​ ಫಂಡ್​ ಅಂತಾ ಬಿಡುಗಡೆ ಮಾಡಲಿ ಎಂದೂ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

Share Post