ಮಹಿಳೆ Eyebrow ಮಾಡಿಸಿಕೊಂಡಿದ್ದೇ ತಪ್ಪಾಯ್ತು; ತಲಾಖ್ ಕೊಟ್ಟ ಗಂಡ!
ಲಖನೌ; ಮಹಿಳೆ Eyebrow ಮಾಡಿಸಿಕೊಂಡಿದ್ದಕ್ಕೆ ಕುಪಿತಗೊಂಡ ಗಂಡ ಆಕೆಗೆ ತಲಾಖ್ ನೀಡುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾನ್ಪುರದ ಮಹಿಳೆ ಗುಲ್ಸಾಬ ಎಂಬಾಕೆ ತನ್ನ ಅತ್ತೆಯ ಮನೆಯಲ್ಲಿ ವಾಸವಾಗಿದ್ದಳು. ಆದ್ರೆ ಆಕೆಯ ಪತಿ ಸೌದಿ ಅರೇಬಿಯಾದಲ್ಲಿ ವಾಸ ಮಾಡುತ್ತಿದ್ದಾನೆ. ಈ ನಡುವೆ ಗುಲ್ಸಾಬ ಅವರು ನಿನ್ನೆ ಸಂಜೆ ಪಾರ್ಲರ್ಗೆ ಹೋಗಿ Eyebrow ಮಾಡಿಸಿಕೊಂಡಿದ್ದಾಳೆ. ನಂತರ ಪತಿಯ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದಾಳೆ. ಪತ್ನಿ Eyebrow ಮಾಡಿಸಿಕೊಂಡಿದ್ದನ್ನು ವಿಡಿಯೋ ಕಾಲ್ನಲ್ಲಿ ನೋಡಿದ ಪತಿ ಕುಪಿತನಾಗಿದ್ದಾನೆ.
ನನ್ನ ಅನುಮತಿ ಪಡೆಯದೇ ಅದು ಹೇಗೆ Eyebrow ಮಾಡಿಸಿಕೊಂಡೆ ಎಂದು ಪ್ರಶ್ನೆ ಮಾಡಿದ್ದಾನೆ. ಸಾಲದೆಂಬಂತೆ ವಿಡಿಯೋ ಕಾಲ್ನಲ್ಲೇ ಆತ ತಲಾಖ್ ತಲಾಖ್ ಎಂದು ಹೇಳಿದ್ದಾನೆ. ಇದರಿಂದಾಗಿ ಕಂಗಾಲಾದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಕೆಲ ದಿನಗಳಿಂದ ನನ್ನ ಅತ್ತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಳು ಎಂದೂ ಆಕೆ ಆರೋಪ ಮಾಡಿದ್ದಾಳೆ. ಮಹಿಳೆಯ ಪತಿ ಮತ್ತು ಅತ್ತೆಯ ವಿರುದ್ಧ ಪೊಲೀಸರು ಮುಸ್ಲಿಂ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.