National

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ; ಏಳು ಮಂದಿ ದುರ್ಮರಣ

ಶಿಮ್ಲಾ; ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಅದರಲ್ಲೂ ಸೋಲನ್ ಜಿಲ್ಲೆಯಲ್ಲಿ ಭಾರೀ ಮೇಘಸ್ಫೋಟ ಸಂಭವಿಸಿದೆ. ರಣಭೀಕರ ಮಳೆಗೆ ಏಳು ಮಂದಿ ದುರ್ಮರಣಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಮನೆಗಳು, ದನದ ಕೊಟ್ಟಿಗೆಗಳು ಮಳೆ ನೀರಿನಲ್ಲಿ ಕೊಚ್ಚಿಹೋಗಿವೆ. ಇದರಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತಾವಾಗಿವೆ.

ಸೋಲನ್‌ನ ಕಂದಘಾಟ್‌ನ ಜಾಡೋನ್ ಎಂಬ ಗ್ರಾಮವೊಂದರಲ್ಲಿ ಮೇಘಸ್ಫೋಟದಿಂದ ಭಾರಿ ಸನಾಹುತ ಸಂಭವಿಸಿದೆ. ಇನ್ನೂ ಒಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದೇ ಗ್ರಾಮದ ಎರಡು ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ದನದ ಕೊಟ್ಟಿಗೆಗಳು ಕೂಡಾ ದನಗಳ ಸಮೇತ ಕೊಚ್ಚಿಹೋಗಿವೆ. ಹಲವು ಜಾನುವಾರುಗಳೂ ಕೂಡಾ ಮೇಘಸ್ಫೋಟಕ್ಕೆ ಸಿಲುಕಿ ಸಾವನ್ನಪ್ಪಿವೆ.

ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್‌ ಮಾಡಲಾಗುತ್ತಿದೆ. ಜೊತೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Share Post