InternationalLifestyle

gypsy Bride Market; ಇಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮಾರುತ್ತಾರೆ..!

ಬಲ್ಗೇರಿಯಾ; ವಸ್ತುಗಳನ್ನು, ಪ್ರಾಣಿಗಳನ್ನು ಮಾರಾಟ ಮಾಡುವ ಮಾರುಕಟ್ಟೆಗಳನ್ನು ನೋಡಿರುತ್ತೇವೆ. ಆದ್ರೆ ಬಲ್ಗೇರಿಯಾದಲ್ಲಿ ಒಂದು ವಿಚಿತ್ರ ಮಾರುಕಟ್ಟೆ ಇದೆ. ಇದು ವರ್ಷಕ್ಕೊಮ್ಮೆ ಮಾತ್ರ ನಡೆಯುವ ಮಾರುಕಟ್ಟೆ. ಈ ಮಾರುಕಟ್ಟೆಯಲ್ಲಿ ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಮಾರಾಟ ಮಾಡಲಾಗುತ್ತದೆ. 

ಹೌದು, ಇದನ್ನು ಜಿಪ್ಸಿ ಬ್ರೈಡ್‌ ಮಾರ್ಕೆಟ್‌ ಅಂತ ಕರೀತಾರೆ. ಕಲೈಜಿ ಎಂಬ ಸಮುದಾಯ ಇಂತಹದ್ದೊಂದು ಸಂಪ್ರದಾಯ ಅನಾದಿ ಕಾಲದಿಂದ ಅನುಸರಿಸುತ್ತಿದೆ. ಕಲೈಜಿ ಸಮುದಾಯದ ಮದುವೆ ವಯಸ್ಸಿಗೆ ಬಂದ ಅಂದ್ರೆ 16 ರಿಂದ 20 ವರ್ಷದ ಹೆಣ್ಣು ಮಕ್ಕಳನ್ನು ಈ ಮಾರುಕಟ್ಟೆಗೆ ಕರೆತರಲಾಗುತ್ತದೆ. ಹೆಣ್ಣು ಮಕ್ಕಳನ್ನು ಚೆನ್ನಾಗಿ ಸಿಂಗರಿಸಿ ಮಾರುಕಟ್ಟೆಯಲ್ಲಿ ನಿಲ್ಲಿಸಲಾಗಿರುತ್ತದೆ. ಮದುವೆಯಾಗಬೇಕಿರುವ ಗಂಡು ಮಕ್ಕಳು ಬಂದು ಹೆಣ್ಣುಗಳನ್ನು ನೋಡುತ್ತಾರೆ. ಇಷ್ಟವಾದವರನ್ನು ಖರೀದಿ ಮಾಡಿಕೊಂಡು ಹೋಗುತ್ತಾರೆ.

ಇಲ್ಲಿ ಹೆಣ್ಣು ಮಕ್ಕಳನ್ನು ಎಂಟನೇ ತರಗತಿಗೇ ಶಾಲೆಯಿಂದ ಹೊರಹಾಕುತ್ತಾರೆ. ಇಂತಹ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದಕ್ಕಾಗಿ ಜಿಪ್ಸಿ ಮಾರುಕಟ್ಟೆ ಆಯೋಜನೆ ಮಾಡಲಾಗುತ್ತದೆ. ಇದು ಪುರಾತನ ಪದ್ಧತಿಯಾಗಿದ್ದು, ಈಗಲೂ ಇದನ್ನು ಅನುಸರಿಸಲಾಗುತ್ತಿದೆ.

 

Share Post