HealthLifestyleNational

ತೃತೀಯಲಿಂಗಿ ಜೋಡಿಗೆ ಮಗು ಜನನ; ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ

ಕೇರಳ; ಇತ್ತೀಚೆಗಷ್ಟೇ ಕೇರಳದಿಂದ ಒಂದು ಸುದ್ದಿಯಾಗಿತ್ತು. ತೃತೀಯಲಿಂಗಿ ದಂಪತಿಗೆ ಮಗು ಜನಿಸುತ್ತಿದೆ ಎಂದು ಹೇಳಲಾಗಿತ್ತು. ಇದೀಗ ಆ ತೃತೀಯಲಿಂಗಿಗೆ ಹೆರಿಗೆಯಾಗಿದ್ದು, ಮಗು ಆರೋಗ್ಯವಾಗಿದೆ.

ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ತೃತೀಯಲಿಂಗಿ ಜಿಯಾ ಪಾವಲ್​ಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ. ತೃತೀಯಲಿಂಗಿ ದಂಪತಿ ಜಹಾದ್​ ಮತ್ತು ಜಿಯಾ ಪಾವಲ್​ ಇತ್ತೀಚೆಗಷ್ಟೇ ಒಂದು ಫೋಟೋ ಹಂಚಿಕೊಂಡಿದ್ದರು. ನಾವು ತಂದೆ-ತಾಯಿ ಆಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು.

ಇದು ದೇಶದಲ್ಲೇ ಮೊದಲ ಪ್ರಕರಣವಾಗಿದೆ. ಇವರಿಬ್ಬರೂ ಮೂರು ವರ್ಷಗಳಿಂದ ಒಟ್ಟಿಗೆ ವಾಸ ಮಾಡುತ್ತಿದ್ದಾರೆ. ಇವರು ಮಗು ಹೊಂದುವುದಕ್ಕಾಗಿ ಲಿಂಗ ಹಾಗೂ ಗರ್ಭಪರಿವರ್ತನೆಗಾಗಿ ಇಬ್ಬರೂ ಹಾರ್ಮೋನ್‌ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಇವರಿಗೆ ಮಗು ಜನಿಸಿದೆ. ಆದ್ರೆ ಮಗುವಿನ ಲಿಂಗವನ್ನು ಸದ್ಯಕ್ಕೆ ಬಹಿರಂಗ ಮಾಡಿಲ್ಲ.

 

Share Post