BengaluruEconomyLifestyle

ಹೀಗೆ ಜೀವಿಸುವವರನ್ನು ಮಾತ್ರ ಲಕ್ಷ್ಮೀ ಕರುಣಿಸುತ್ತಾಳಂತೆ..!

ಬೆಂಗಳೂರು; ಜೀವನದಲ್ಲಿ ಹಣವೊಂದಿದ್ದರೆ ಸಾಕು ಏನು ಬೇಕಾದರೂ ಪಡೆಯಬಹುದು ಅನ್ನೋದು ಎಲ್ಲರ ಮಾತು. ಹೀಗಾಗಿ, ಹಣ, ಐಶ್ವರ್ಯ ಕರುಣಿಸಲೆಂದು ಜನರು ಯಾವಾಗಲೂ ಲಕ್ಷ್ಮೀ ದೇವತೆಯನ್ನು ಪೂಜಿಸುತ್ತಿರುತ್ತಾರೆ. ಬೇಡುತ್ತಿರುತ್ತಾರೆ. ಆದ್ರೆ ಲಕ್ಷ್ಮೀ ಕೆಲವರಿಗೆ ಮಾತ್ರ ಕರುಣಿಸುತ್ತಾಳೆ. ಧಾರ್ಮಿಕ ಪಂಡಿತರು ಹೇಳುವ ಪ್ರಕಾರ, ಈ ಕೆಳಗಿನ ನಿಯಮಗಳನ್ನು ಪಾಲಿಸುವವರಿಗೆ ಮಾತ್ರ ಲಕ್ಷ್ಮೀ ಸದಾ ಒಲಿಯುತ್ತಾಳಂತೆ.

ಧ್ಯಾನ

ಧ್ಯಾನವು ನಮ್ಮ ಜೀವನದ ಒಂದು ಭಾಗವಾಗಬೇಕು.  3000 ವರ್ಷಗಳ ಹಿಂದೆಯೇ ಋಷಿಗಳು ಮತ್ತು ದೇವತೆಗಳು ಕೂಡಾ ಧ್ಯಾನ ಮಾಡುತ್ತಿದ್ದರು. ಹೀಗಾಗಿ ಧ್ಯಾನಕ್ಕೆ ವಿಶೇಷ ಮಹತ್ವವಿದೆ. ಬೆಳಗ್ಗೆ ಸಮಯದಲ್ಲಿ ಹಾಗೂ ಮಲಗುವ ಮುಂಚೆ ಧ್ಯಾನ ಮಾಡುವವರಿಗೆ ಲಕ್ಷ್ಮೀ ಒಲಿಯುತ್ತಾಳಂತೆ.

ಸರಳ ಜೀವನ

ಇರುವುದರಲ್ಲೇ ತೃಪ್ತರಾಗಬೇಕು. ಮೊದಲು ನಮಗೆ ಸಿಕ್ಕಿದ್ದನ್ನು ಖುಷಿಯಿಂದ ಅನುಭವಿಸಬೇಕು. ಆದಷ್ಟು ಸರಳ ಜೀವನ ನಡೆಸಬೇಕು. ಲಕ್ಷ್ಮೀ ದೇವಿ ಜಪ ಮಾಡುವ ನಿಯಮಗಳಲ್ಲಿ ಸರಳ ಜೀವನವೂ ಕೂಡಾ ಒಂದು. ಸರಳ ಜೀವನ ನಡೆಸುವವವರಿಗೆ ಲಕ್ಷ್ಮೀ ದೇವಿ ಖಂಡಿತವಾಗಿಯೂ ಒಲಿಯುತ್ತಾಳೆ.

ಬದ್ಧತೆ

ನಾವು ಯಾವುದೇ ಕೆಲಸದಲ್ಲಿ ಯಶಸ್ವಿಯಾಗಬೇಕಾದರೆ, ನಾವು ಅದಕ್ಕೆ ಬದ್ಧರಾಗಿರಬೇಕು. ನಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡುತ್ತಾ, ಸರಿಯಾಗಿ ಶ್ರದ್ಧೆ ಇಡದಿದ್ದರೆ ಆಗುವುದಿಲ್ಲ. ಯಾವುದೇ ಪ್ರಯತ್ನ ಮಾಡದೇ, ನಾವು ಮಾಡುವ ಕೆಲಸದ ಮೇಲೆ ಬದ್ಧತೆ ತೋರಿಸದಿದ್ದರೆ ಯಾವು ಯಶಸ್ವಿಯಾಗುವುದಿಲ್ಲ. ಯಾಕಂದ್ರೆ, ಬದ್ಧತೆ ಇಲ್ಲದವರಿಗೆ ಲಕ್ಷ್ಮೀಯ ಕೃಪಾಕಟಾಕ್ಷ ಇರುವುದಿಲ್ಲ.

ಧೈರ್ಯ

ಲಕ್ಷ್ಮಿ ದೇವಿಯು ಧೈರ್ಯಶಾಲಿಗಳಿಗೆ ಶಕ್ತಿಯನ್ನು ತುಂಬುತ್ತಾಳೆ. ಧೈರ್ಯ ಒಂದಿದ್ದರೆ ಎಂತಹ ಸಮಸ್ಯೆಯೂ ನಿವಾರಣೆಯಾಗುತ್ತದೆ. ಸಮಸ್ಯೆ ನಿವಾರಣೆಯಾಗೋದು ಅಂದ್ರೆ ಲಕ್ಷ್ಮೀ ಒಲಿಯೋದು ಎಂದೇ ಅರ್ಥ.

Share Post