BengaluruHealthLifestyle

ನಿಮಿಷಕ್ಕೆ ಇಷ್ಟು ಮೆಟ್ಟಿಲು ಹತ್ತಿದರೆ ಮಾತ್ರ ನೀವು ಆರೋಗ್ಯದಲ್ಲಿ ಫಿಟ್‌..!

ಬೆಂಗಳೂರು; ನೀವು ನಿಮಿಷಕ್ಕೆ ಎಷ್ಟು ಮೆಟ್ಟಿಲು ಹತ್ತಬಲ್ಲಿರಿ..? ಅಷ್ಟಕ್ಕೂ ಮೆಟ್ಟಿಲು ಹತ್ತುವುದೂ ವ್ಯಾಯಾಮದ ಒಂದು ಭಾಗ ಗೊತ್ತಾ..? ಹೌದು, ಸರಿಯಾದ ಮಾರ್ಗದಲ್ಲಿ ನಾವು ಮನೆಯ ಮೆಟ್ಟಿಲುಗಳನ್ನು ಹತ್ತಿ ಇಳಿದರೆ ಅದೇ ಉತ್ತಮ ವ್ಯಾಯಾಮವಾಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದ್ರೆ ನಾವು ಮೆಟ್ಟಿಲುಗಳನ್ನು ಹೇಗೆ ಹತ್ತುತ್ತೇವೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಸರಿಯಾದ ರೀತಿಯಲ್ಲಿ ಹತ್ತುವುದರಿಂದ ಹೃದಯದ ಆರೋಗ್ಯಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ತಜ್ಞರು.

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಪ್ರಕಾರ, ನಾಲು ಸಾಲುಗಳಲ್ಲಿನ 20 ಮೆಟ್ಟಿಲುಗಳನ್ನು ಒಂದು ನಿಮಿಷದಲ್ಲಿ ಹತ್ತಲು ಸಾಧ್ಯವಾದರೆ ನೀವು ಆರೋಗ್ಯವಾಗಿದ್ದೀರಿ ಎಂದರ್ಥ. ಒಂದು ನಿಮಿಷದಲ್ಲಿ 20 ಮೆಟ್ಟಿಲು ಹತ್ತೋದು ಸರಿಯಾದ ರೀತಿಯ ಒಂದು ವ್ಯಾಯಾಮದ ಭಾಗ. ಆದರೆ ಈ ಮೆಟ್ಟಿಲುಗಳನ್ನು ಹತ್ತಲು ನೀವು ಒಂದು ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ, ನೀವು ಗ್ಯಾರೆಂಟಿ ಹೃದ್ರೋಗ ತಜ್ಞರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಅಂತಾರೆ ತಜ್ಞ ವೈದ್ಯರು.

ಆದರೆ ಈ ನಿಯಮವು ಎಲ್ಲಾ ವಯೋಮಾನದವರಿಗೆ ಅನ್ವಯಿಸುವುದಿಲ್ಲ. 35 ವರ್ಷದೊಳಗಿನವರಿಗೆ ಮಾತ್ರ ಅನ್ವಯಿಸುತ್ತದೆ. ಒಂದು ನಿಮಿಷದಲ್ಲಿ ನೀವು ಆ ಮೆಟ್ಟಿಲುಗಳನ್ನು ಹತ್ತದಿದ್ದರೆ, ನಿಮಗೆ ಹೃದಯದ ಸಮಸ್ಯೆಗಳಿರಬಹುದು. ನೀವು ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ 20 ಮೆಟ್ಟಿಲು ಹತ್ತುತ್ತೀರಾದರೆ ನೀವು ಸೂಪರ್‌ ಫಿಟ್‌ ಆಗಿದ್ದೀರಿ ಎಂದು ಲೆಕ್ಕ.

ಮೆಟ್ಟಿಲು ಹತ್ತುವ ಪ್ರಯೋಜನಗಳು

೧. ನಿತ್ಯ ಮೆಟ್ಟಿಲು ಹತ್ತುತ್ತಿದ್ದರೆ ಹೃದಯಕ್ಕೆ ದುಡಿದಂತಾಗುತ್ತದೆ.

೨. ಇಲ್ಲಿ ಮೆಟ್ಟಿಲುಗಳನ್ನು ಹತ್ತುವುದು ನಿಮ್ಮ ಕಾಲುಗಳು ಮಾತ್ರವಲ್ಲದೆ ನಿಮ್ಮ ಹೃದಯವೂ ಆಗಿದೆ

೩. ಪ್ರತಿ ಹೆಜ್ಜೆಗೂ ಹೃದಯ ಬಡಿತ ಹೆಚ್ಚಾಗುತ್ತದೆ. ಇದು ಹೃದಯ ಸ್ನಾಯುವಿನ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ

೪. ಮೆಟ್ಟಿಲು ಹತ್ತುವುದು ಏರೋಬಿಕ್ ಚಟುವಟಿಕೆ. ನೀವು ಏರುವ ಪ್ರತಿಯೊಂದು ಹೆಜ್ಜೆಯೂ ನಿಮ್ಮ ಹೃದಯದ ಆರೋಗ್ಯ ಸುಧಾರಿಸುತ್ತದೆ

೫. ಆಗಾಗ ಮೆಟ್ಟಿಲು ಹತ್ತಿ ಇಳಿಯುವುದರಿಂದ ದೇಹಕ್ಕೆ ಬೇಕಾಗುವ ಅರ್ಧದಷ್ಟು ವ್ಯಾಯಾಮ ಸಿಗುತ್ತದೆ

೬. ಮೆಟ್ಟಿಲು ಹತ್ತುವುದರಿಂದ ದೇಹದ ತೂಕ ಕೂಡ ಸುಲಭವಾಗಿ ಕಡಿಮೆಯಾಗುತ್ತದೆ

 

ಮೆಟ್ಟಿಲು ಹತ್ತುವ ವ್ಯಾಯಾಮ ಹೇಗೆ ಮಾಡಬೇಕು..?

೧. ಮೊದಲು ಮೈ ಬೆಚ್ಚಗೆ ಮಾಡಲು ಹತ್ತು ನಿಮಿಷಗಳ ಕಾಲ ನೆಲದ ಮೇಲೆ ಹಿಂದಕ್ಕೆ ಮತ್ತು ಮುಂದಕ್ಕೆ ನಡೆಯಿರಿ

೨. 6 ಮೆಟ್ಟಿಲುಗಳಿರುವ ಎರಡು ಸೆಟ್ ಮೆಟ್ಟಿಲುಗಳನ್ನು ಆಯ್ಕೆಮಾಡಿ

೩. ಈಗ ಈ ಎರಡು ಸಾಲುಗಳ ಮೆಟ್ಟಿಲುಗಳನ್ನು ಆದಷ್ಟು ವೇಗವಾಗಿ ಏರಲು ಪ್ರಯತ್ನಿಸಿ

೪. ಇಳಿಯುವಾಗ ಆರಾಮವಾಗಿ ಇಳಿಯಿರಿ

೫. ಈ ರೀತಿಯಾಗಿ ನೀವು ಮೂರು ಬಾರಿ ಮಾಡಿ. ಪ್ರತಿ ಸೆಷನ್ ನಡುವೆ 90 ಸೆಕೆಂಡುಗಳ ಅಂತರವಿರಲಿ

೬. ಗ್ಯಾಪ್ ತೆಗೆದುಕೊಳ್ಳುವುದೆಂದರೆ ನಿಂತಲ್ಲೇ ನಿಲ್ಲುವುದಲ್ಲ. ಆ 90 ಸೆಕೆಂಡುಗಳ ಕಾಲ ನೆಲದ ಮೇಲೆ ಹಿಂದಕ್ಕೆ ಮತ್ತು ಮುಂದಕ್ಕೆ ನಡೆಯಿರಿ

ಈಗಾಗಲೇ ಹೃದಯ ಸಂಬಂಧಿ ಕಾಯಿಲೆಗಳಿದ್ದ ಮೆಟ್ಟಿಲು ಹತ್ತುವುದರಿಂದ ದೂರವಿರುವುದು ಉತ್ತಮ. ಯಾವುದಕ್ಕೂ ನಿಮಗೆ ಗೊತ್ತಿರುವ ತಜ್ಞರು ಅಭಿಪ್ರಾಯ ಪಡೆದು ಈ ರೀತಿಯ ವ್ಯಾಯಾಮಗಳನ್ನು ಮಾಡೋದು ಒಳ್ಳೆಯದು.

 

Share Post