CrimeDistricts

ಇಸ್ಪೀಟ್‌ ಅಡ್ಡೆಯ ಮೇಲೆ ಪೊಲೀಸರ ದಾಳಿ; ಲಕ್ಷಾಂತರ ರೂ. ನಗದು ಜಪ್ತಿ

ಬೀದರ್; ಬೀದರ್‌ ಜಿಲ್ಲೆ ಹುಮ್ನಾಬಾದ್‌ ಹೊರ ವಲಯದಲ್ಲಿ ಇಸ್ಪೀಟ್‌ ಆಟ ಜೋರಾಗಿ ನಡೆಯುತ್ತಿದೆ. ಲಕ್ಷ ಲಕ್ಷ ರೂಪಾಯಿ ಪಣಕ್ಕಿಟ್ಟು ಜೂಜಾಟ ಆಡಲಾಗುತ್ತಿದೆ. ಈ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿದ್ದಾರೆ. ಸುಮಾರು 18 ಜನರನ್ನು ಬಂಧಿಸಿದ್ದಾರೆ. ಈ ವೇಳೆ  1.78 ಲಕ್ಷ ರೂಪಾಯಿ  ನಗದು ಹಣವನ್ನು ಜಪ್ತಿ ಮಾಡಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡಿಕೊಂಡು ಇಸ್ಪೀಟ್‌ ಆಡುತ್ತಿದ್ದರು. ಇದು ಹಲವು ದಿನಗಳಿಂದು ಮುಂದುವರೆದಿತ್ತು. ಬೇರೆ ಬೇರೆ ಊರುಗಳಿಂದ ಜನ ಬಂದು ಇಲ್ಲಿ ಜೂಜು ಆಡುತ್ತಿದ್ದರು. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗಿತ್ತು. ಕೆಲವರು ಪೊಲೀಸರಿಗೆ ಮಾಹಿತಿ ಕೂಡಾ ನೀಡಿದ್ದರು.

ಇಂದು ಜೂಜಾಡುತ್ತಿದ್ದುದರ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, 18 ಮಂದಿಯನ್ನು ರೆಡ್‌ಹ್ಯಾಂಡಾಗಿ ಹಿಡಿದಿದ್ದಾರೆ. ಪಣಕ್ಕಿಟ್ಟಿದ್ದ 1.78 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.

 

Share Post