HealthNational

ಕೊರೋನಾ ಲಸಿಕೆ ಹಾಕಿಸಿಕೊಳ್ಳಿ; ಟಿವಿ, ಫ್ರಿಡ್ಜ್‌ ಗೆಲ್ಲಿ..!

ಮುಂಬೈ: ದೇಶದಲ್ಲಿ ಕೊರೋನಾ ಮೂರನೇ ಅಲೆ ಶುರುವಾದಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಲಸಿಕಾ ಅಭಿಯಾನ ಮತ್ತೆ ಚುರುಕುಗೊಂಡಿದೆ. ಜನರು ಇದ್ದಲ್ಲಿಗೇ ಹೋಗಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಹೀಗಿದ್ದರೂ ಕೆಲವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದ ಹಿಂಗೋಲಿ ಪುರಸಭೆ ಅಧಿಕಾರಿಗಳು ಜನರು ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲು ಒಳ್ಳೆ ಪ್ಲ್ಯಾನ್‌ ಮಾಡಿದ್ದಾರೆ. ಲಸಿಕೆ ಹಾಕಿಸಿಕೊಂಡರೆ ಟಿವಿ, ಫ್ರಿಡ್ಜ್‌ ಸೇರಿ ಹಲವು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಗೆಲ್ಲುವ ಆಫರ್‌ ನೀಡಿದ್ದಾರೆ.


ಎಲ್‌ಇಡಿ ಟಿ.ವಿ, ವಾಷಿಂಗ್ ಮೆಶಿನ್, ರೆಫ್ರಿಜರೇಟರ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಗೆಲ್ಲಬಹುದು ಎಂದು ಪುರಸಭೆ ಅಧಿಕಾರಿಗಳು ಪ್ರಚಾರ ನಡೆಸುತ್ತಿದ್ದಾರೆ. ಈ ಮೂಲಕ ಲಸಿಕೆ ಹಾಕಿಸಿಕೊಳ್ಳಲು ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಂದೆಡೆ ಚಂದ್ರಾಪುರ ಸ್ಥಳೀಯ ಸಂಸ್ಥೆಯಲ್ಲೂ ಜನರು ಲಸಿಕೆ ಪಡೆಯುವುದನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಬಹುಮಾನದ ಘೋಷಣೆ ಮಾಡಲಾಗಿದೆ. ಮುಂಬೈನಿಂದ ಡಿಸೆಂಬರ್ 27ರಂದು ಲಕ್ಕಿ ಡ್ರಾ ನಡೆಯಲಿದ್ದು, ಡಿಸೆಂಬರ್ 2 ರಿಂದ 24ರ ನಡುವೆ ಲಸಿಕೆ ಪಡೆದವರಿಗೆ ಲಕ್ಕಿ ಡ್ರಾ ಟಿಕೆಟ್ ಸಿಗಲಿದೆ.

Share Post