HealthNational

ಒಮಿಕ್ರಾನ್‌ ಇರುವ ದೇಶಗಳಿಂದ ಬಂದ 6 ಮಂದಿಗೆ ಸೋಂಕು..!

ನವದೆಹಲಿ: ಒಮಿಕ್ರಾನ್‌ ಕಾಣಿಸಿಕೊಂಡಿರುವ ರಾಷ್ಟ್ರಗಳಿಂದ ಭಾರತಕ್ಕೆ ಬಂದ ಆರು ಮಂದಿಯಲ್ಲಿ ಕೊರೋನಾ ಸೋಂಖು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆತಂಕ ಶುರುವಾಗಿದೆ. ಆದರೆ, ಅವರಿಗೆ ಒಮಿಕ್ರಾನ್‌ ರೂಪಾಂತರ ಸೋಂಕು ತಗುಲಿದೆಯಾ ಅಥವಾ  ಸಾಮಾನ್ಯ ಕೊರೋನಾ ಸೋಂಕು ತಗುಲಿದೆಯಾ ಎಂಬುದರ ಬಗ್ಗೆ ಇನ್ನೂ ದೃಢಪಟ್ಟಿಲ್ಲ.

ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ಮೊದಲ ದಿನ, ಒಮಿಕ್ರಾನ್ ಕಾಣಿಸಿಕೊಂಡಿರುವ ರಾಷ್ಟ್ರಗಳಿಂದ ಆಗಮಿಸಿದ ಒಟ್ಟು 3,000 ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ವೇಳೆ ಆರು ಪ್ರಯಾಣಿಕರಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಇವರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ತಪಾಸಣೆಗೆ ಕಳುಹಿಸಲಾಗಿದೆ. ಅವರಲ್ಲಿ ಕಂಡು ಬಂದಿರುವುದು ಒಮಿಕ್ರಾನ್ ರೂಪಾಂತರ ರೋಗಾಣು ಹೌದೋ, ಅಲ್ಲವೋ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ.

    ಒಮಿಕ್ರಾನ್ ಸೋಂಕು ಹರಡುತ್ತಿರುವ ರಾಷ್ಟ್ರಗಳಿಂದ ಒಟ್ಟು 11 ವಿಮಾನಗಳು ಭಾರತದ ವಿವಿಧ ವಿಮಾನ ನಿಲ್ದಾಣಗಳಿಗೆ ಆಗಮಿಸಿವೆ.  11 ವಿಮಾನಗಳಲ್ಲಿ ಒಟ್ಟು 3,476 ಪ್ರಯಾಣಿಕರು ಆಗಮಿಸಿದ್ದಾರೆ. ಇವರೆಲ್ಲರಿಗೂ RT-PCR ಟೆಸ್ಟ್‌ ಮಾಡಿಸಲಾಗಿದೆ.  ಇವರಲ್ಲಿ 6 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇದು ಹೊಸ ಆತಂಕವನ್ನು ಸೃಷ್ಟಿಸಿದೆ.
Share Post