Bengaluru

ಕಾವೇರಿಗಾಗಿ ಹೋರಾಟ; ನಾಳೆ ಬೆಂಗಳೂರು ಬಂದ್‌.. ಏನಿರುತ್ತೆ, ಏನಿರಲ್ಲ..?

ಬೆಂಗಳೂರು; ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆಂದು ಆಗ್ರಹಿಸಿ ನಾಳೆ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಈ ಬಂದ್‌ಗೆ ಕರೆ ನೀಡಲಾಗಿದೆ. ಕುರುಬೂರು ಶಾಂತಕುಮಾರ್‌ ಈ ಬಂದ್‌ ನೇತೃತ್ವ ವಹಿಸಿದ್ದಾರೆ. ಬಂದ್‌ಗೆ 92 ಸಂಘಟನೆಗಳು ಬೆಂಬಲ ಸೂಚಿಸಿವೆ..

ನಾಳೆ ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಈ ಬಂದ್‌ ನಡೆಯಲಿದೆ. ನಾಳೆ ಬೆಳಗ್ಗೆ 11ಗಂಟೆಗೆ ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್‌ ಸರ್ಕಲ್‌ವರೆಗೆ ಪ್ರತಿಭಟನಾಕಾರರು ಬೃಹತ್‌ ಮೆರವಣಿಗೆ ನಡೆಸಲಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರದ್ದುಗೊಳಿಸಲು ಆಗ್ರಹಿಸಲಾಗುತ್ತದೆ. ತಮಿಳುನಾಡಿಗೆ ಹರಿಸುವ ನೀರು ಕೂಡಲೇ ಸ್ಥಗಿತಗೊಳಿಸುವಂತೆ ಒತ್ತಾಯಿಸಲು ನಿರ್ಧಾರ ಮಾಡಲಾಗಿದೆ. 92 ಸಂಘಟನೆಗಳಿಂದ ಸಂಪೂರ್ಣ ಬೆಂಬಲ, 20ಕ್ಕೂ ಹೆಚ್ಚಿನ ಸಂಘಟನೆಗಳಿಂದ ಬಾಹ್ಯ, ನೈತಿಕ ಬೆಂಬಲ ಸಿಗಲಿದೆ.

ನಾಳೆ ಏನಿರೋದಿಲ್ಲ..?
==============
ಬಿಎಂಟಿಸಿ ಬಸ್‌ಗಳು ಬಾಗಶಃ ರಸ್ತೆಗಿಳಿಯೋದು ಡೌಟು
ಓಲಾ, ಉಬರ್‌ ಆಟೋ, ಟ್ಯಾಕ್ಸಿಗಳು ರಸ್ತೆಗಿಳಿಯೋದಿಲ್ಲ
ಎಪಿಎಂಸಿ ನೌಕರರ ಬೆಂಬಲದಿಂದಾಗಿ ಮಾರುಕಟ್ಟೆಗಳು ಕಾರ್ಯನಿರ್ವಹಿಸಲ್ಲ
ಚಲನಚಿತ್ರ, ಧಾರಾವಾಹಿ ಚಿತ್ರೀಕರಣ ಇರೋದಿಲ್ಲ
ಆಭರಣ ಮಳಿಗೆಗಳು ಸೇರಿ ಬಹುತೇಕ ವ್ಯಾಪಾರ, ವಹಿವಾಟು ಸ್ಥಗಿತ
ಖಾಸಗಿ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಇರೋದಿಲ್ಲ
ರುಪ್ಸಾ ಬೆಂಬಲಿತ ಶಾಲೆಗಳು ಕೂಡಾ ಬಂದ್‌ ಆಗಲಿವೆ

ನಾಳೆ ಯಾವುದಕ್ಕೆಲ್ಲಾ ಅಡ್ಡಿ ಇಲ್ಲ..?
====================
ಹೋಟೆಲ್‌ಗಳು ತೆರೆದಿರುತ್ತವೆ
ಶಾಲೆ-ಕಾಲೇಜು ಭಾಗಶಃ ತೆರೆಯುವ ಸಾಧ್ಯತೆ ಇದೆ
ಮೆಡಿಕಲ್‌ ಸ್ಟೋರ್‌ಗಳ ಓಪನ್‌ ಇರುತ್ತದೆ
ಹಾಪ್‌ಕಾಮ್ಸ್‌ಗಳು ತೆರೆದಿರುತ್ತವೆ ಎಂದು ಹೇಳಲಾಗಿದೆ
ಬೆಂಗಳೂರಿನಿಂದ ಹೊರಹೋಗುವ ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ಇರಬಹುದು

ಬಂದ್‌ಗೆ ಯಾರ್ಯಾರ ಬೆಂಬಲವಿದೆ..?
======================
ಕರ್ನಾಟಕ ಜಲ ಸಂರಕ್ಷಣಾ ಸಮಿತಿ
ರಾಜ್ಯ ರೈತ ಸಂಘಗಳ ಒಕ್ಕೂಟ
ರಾಜ್ಯ ಕಬ್ಬು ಬೆಳೆಗಾರರ ಸಂಘ
ಆಮ್‌ ಆದ್ಮಿ ಪಕ್ಷ
ಬಿಬಿಎಂಪಿ ಕಾರ್ಮಿಕ ಸಂಘ
ಕೆಎಸ್ಸಾರ್ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಯೂನಿಯನ್‌
ವಾಹನ ಚಾಲಕರ ಮತ್ತು ಮಾಲೀಕರ ಸಂಘ
ರುಪ್ಸಾ, ಖಾಸಗಿ ಶಾಲೆಗಳ ಪೋಷಕರ ಸಮನ್ವಯ ಸಮಿತಿ

Share Post