ಮಂತ್ರಾಲಯಕ್ಕೆ ಹೊರಟಿದ್ದ ಬಸ್‌ನಲ್ಲಿ ದಟ್ಟ ಹೊಗೆ
ರಾಯಚೂರು; ಮಂತ್ರಾಲಯಕ್ಕೆ ಹೊರಟಿದ್ದ ರಾಯರ ಭಕ್ತರಿದ್ದ ಸರ್ಕಾರಿ ಬಸ್‌ನಲ್ಲಿ ಇದ್ದಕ್ಕಿದ್ದಂತೆ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಭಕ್ತರು ಕೆಲಕಾಲ ಆತಂಕಕ್ಕೀಡಾದ ಘಟನೆ ನಡೆದಿದೆ. ಆಂಧ್ರಪ್ರದೇಶದ ಮಾದಾವರಂ ಬಳಿ ಈ ಘಟನೆ ನಡೆದಿದ್ದು, ಕೂಡಲೇ ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಳಿಸಿ, ಸಮಸ್ಯೆಯನ್ನು ಬಗೆಹರಿಸಲಾಗಿದೆ.
ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವ ಇತ್ತು. ಈ ಹಿನ್ನೆಲೆಯಲ್ಲಿ ರಾಯಚೂರಿನಿಂದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ನಲ್ಲಿ ರಾಯರ ಭಕ್ತರು ಮಂತ್ರಾಲಯಕ್ಕೆ ಹೊರಟಿದ್ದರು. ಈ ವೇಳೆ ಆಂಧ್ರಪ್ರದೇಶದ ಮಾದಾವರಂ ಬಳಿ ಬಸ್ ಬಂದಾಗ ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಹೊಗೆ ಇಡೀ ಬಸ್ ಆವರಿಸಿದೆ.
ಅನಂತರ ಎಲ್ಲರನ್ನು ಕೆಳಗಿಳಿಸಲಾಯಿತು. ಪಕ್ಕದಲ್ಲೇ ಇದ್ದ ಮನೆಯಿಂದ ನೀರು ತಂದು ರೇಡಿಯೇಟರ್ ಮೇಲೆ ಸುರಿಯಲಾಯಿತು. ಆಗ ಹೊಗೆ ನಿಂತಿದೆ. ಅನಂತರ ಬಸ್ ಮುಂದಕ್ಕೆ ಪ್ರಯಾಣ ಮಾಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಳೆಯ ಬಸ್‌ಗಳೇ ಹೆಚ್ಚಿದ್ದು, ಈ ರೀತಿಯ ತೊಂದರೆ ಸಾಮಾನ್ಯ ಎಂಬ ಮಾತುಗಳು ಕೇಳಿಬರುತ್ತಿವೆ.