CrimeNational

ಪತ್ನಿ ಮೇಲೆ ಹಲ್ಲೆ ಮಾಡಿ, ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಪಾಪಿ ಪತಿ

ಜೈಪುರ್; ಪತಿ ಹಾಗೂ ಆತನ ಮನೆಯವರೇ ಮಹಿಳೆಯನ್ನು ಥಳಿಸಿ, ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ರಾಜಸ್ಥಾನದ ಪ್ರತಾಪ್‌ಗಢದಲ್ಲಿ ನಡೆದಿದೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ಆಕ್ರೋಶಗಳು ವ್ಯಕ್ತವಾಗುತ್ತಿವೆ. ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಲಾಗುತ್ತಿದೆ.

ವಿಡಿಯೋ ಒಂದು ವೈರಲ್‌ ಆಗಿದ್ದು, ಇದರಲ್ಲಿ ಪತಿ ತನ್ನ ಪತ್ನಿಯನ್ನು ಹಲ್ಲೆ ಮಾಡುತ್ತಿರುವುದು ಹಾಗೂ ವಿವಸ್ತ್ರಗೊಳಿಸುತ್ತಿರುವ ದೃಶ್ಯಾವಳಿ ಇದೆ. ಈ ವೇಳೆ ಆ ಮಹಿಳೆ ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ಸಹಾಯಕ್ಕೆ ಬಂದಿಲ್ಲ. ಅಂದಹಾಗೆ ಈ ಮಹಿಳೆ ಗಂಡನನ್ನು ತೊರೆದು ಮತ್ತೊಬ್ಬ ವ್ಯಕ್ತಿಯೊಂದಿಗೆ ವಾಸವಿದ್ದಳು. ಈ ವಿಚಾರ ತಿಳಿದ ಗಂಡ, ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

Share Post