ಸ್ವಂತ ಅಣ್ಣನ ಮಗಳನ್ನೇ ಮದುವೆಯಾದ ಯುವಕ; ಗ್ರಾಮಸ್ಥರು ಏನಂದರು ಗೊತ್ತಾ..?
ಜೌನ್‌ಪುರ್(ಉತ್ತರಪ್ರದೇಶ); ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಗಳು, ವಿಚಿತ್ರ ಮದುವೆಗಳು ಆಗಾಗ ನಡೆಯುತ್ತಿರುತ್ತವೆ. ಇದೀಗ ವ್ಯಕ್ತಿಯೊಬ್ಬ ಸ್ವಂತ ಅಣ್ಣನ ಮಗಳನ್ನೇ ಮದುವೆಯಾಗಿದ್ದಾನೆ. ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆ ತಾಜುದ್ದೀನ್‌ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಬ್ಬರೂ ಕುಟುಂಬಸ್ಥರ ಸಮ್ಮುಖದಲ್ಲೇ ಆಂಜನೇಯನ ದೇವಸ್ಥಾನದಲ್ಲಿ ಈ ಮದುವೆ ಮಾಡಲಾಗಿದೆ. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಶುಭಂ ಎಂಬ ವ್ಯಕ್ತಿ ತನ್ನ ಸ್ವಂತ ಅಣ್ಣನ ಮಗಳಾದ ರಿಯಾಳನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದನಂತೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಇದು ಮನೆಯವರಿಗೆ ಗೊತ್ತಾಗಿದೆ. ಮೊದಲಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೆ ಇಬ್ಬರ ಒತ್ತಾಯಕ್ಕೆ ಮಣಿದು ಮದುವೆಗೆ ಒಪ್ಪಿದ್ದಾರೆ. ಅನಂತರ ಮಡಿಯಾಹುನ್ ಕೊಟ್ವಾಲಿ ಪ್ರದೇಶದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಇಬ್ಬರಿಗೂ ವಿವಾಹ ಮಾಡಿದ್ದಾರೆ.
ಮದುವೆಯ ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದೂ ಧರ್ಮಕ್ಕೆ ಇದು ವಿರುದ್ಧವಾದುದು, ಇದು ಪಾಪದ ಮದುವೆ ಎಂದು ಗ್ರಾಮಸ್ಥರು ಜರಿದಿದ್ದಾರೆ. ಈ ಇಬ್ಬರೂ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಗೊತ್ತಾಗಿದೆ.