National

ಕಾರ್ಗಿಲ್‌ ಯುದ್ಧ; ಇದು ಪ್ರಪಂಚದ ವಿಶಿಷ್ಟ ಹಾಗೂ ರೋಚಕ ಯುದ್ಧ – ಯಾಕೆ ಗೊತ್ತಾ..?

ಬೆಂಗಳೂರು; ಇಂದಿನ ಕಾರ್ಗಿಲ್‌ ಯುದ್ಧ ನಡೆದು 24 ವರ್ಷವಾಗಿದೆ. ಭಾರತದ ಸೈನಿಕರು ಪಾಕ್‌ ಸೈನಿಕರನ್ನು ಬಗ್ಗು ಬಡಿದು ಆಪರೇಷನ್‌ ವಿಜಯ್‌ ಕಾರ್ಯಾಚರಣೆ ಯಶಸ್ವಿಗೊಳಿಸಿದ ದಿನ ಇಂದು. 1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣಕೊಟ್ಟ ಸೈನಿಕರ ಶೌರ್ಯ, ಪರಾಕ್ರಮ ನೆನಪಿಸಿಕೊಳ್ಳುವ ಹಾಗೂ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್‌ ವಿಜಯ್‌ ದಿವಸ್‌ ಆಚರಿಸಲಾಗುತ್ತದೆ. ಇಂದು 24ನೇ ವರ್ಷದ ವಿಜಯ್‌ ದಿವಸ್‌ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಗಿಲ್‌ ಯುದ್ಧದ ಸಮಯಯ ಕೆಲ ಕುತೂಹಲ ಘಟನೆಗಳನ್ನು ಮೆಲುಕು ಹಾಕೋಣ ಬನ್ನಿ..

ಅಂದು ಪಾಕಿಸ್ತಾನಿ ಸೈನಿಕರು ಎಲ್‌ಒಸಿ ದಾಟಿ ಬಂದಿದ್ದರು. ನಮ್ಮ ಭಾರತಕ್ಕೆ ಸೇರಿದ ಕೆಲ ಬೆಟ್ಟಗಳನ್ನು ವಶಪಡಿಸಿಕೊಂಡಿದ್ದರು. ಬೆಟ್ಟದ ಮೇಲೆ ನಿಂತು ಭಾರತೀಯ ಸೈನಿಕರಿಗೆ ಸವಾಲು ಹಾಕಿದ್ದರು. ಆದ್ರೆ ಭಾರತೀಯ ಸೈನಿಕರು ಪ್ರತಿಸವಾಲಾಕಿ ಪಾಕ್‌ ಸೈನಿಕರನ್ನು ಶರಣಾಗುವಂತೆ ಮಾಡಿದರು. ಈ ಮಿಲಿಟರಿ ಕಾರ್ಯಾಚರಣೆಗೆ ಕಾರ್ಗಿಲ್‌ ಯುದ್ದ ಎಂದು ಕರೆದರೆ, ಇಡೀ ಕಾರ್ಯಾಚರಣೆಗೆ ಆಪರೇಷನ್‌ ವಿಜಯ್‌ ಎನ್ನುತ್ತಾರೆ.

ಕಾರ್ಗಿಲ್‌ ಯುದ್ಧ ಬರೋಬ್ಬರಿ ಎರಡು ತಿಂಗಳುಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಪಾಕ್‌ ಸೈನಿಕರ ಜೊತೆ ಹೋರಾಡಿ ಸುಮಾರು 527 ಭಾರತೀಯ ಸೈನಿಕರು ಹುತಾತ್ಮರಾದರು. ಇವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿ ವರ್ಷ ಜುಲೈ 26ರಂದು ದೆಹಲಿಯ ಇಂಡಿಯಾ ಗೇಟ್‌ನ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ.

ಅಂದಹಾಗೆ ಈ ಯುದ್ಧ ಜಗತ್ತಿನಲ್ಲೇ ಅತ್ಯಂತ ವಿಶಿಷ್ಟ ಹಾಗೂ ರೋಚಕವಾದದ್ದು. ಯಾಕಂದ್ರೆ ಅಂದು ಪಾಕ್‌ ಸೈನಿಕರು ಬೆಟ್ಟಗಳ ಮೇಲೆ ನಿಂತಿದ್ದರು. ನಮ್ಮ ಭಾರತೀಯ ಸೈನಿಕರು ಬೆಟ್ಟಗಳ ಕೆಳಗಿದ್ದರು. ಪಾಕ್‌ ಸೈನಿಕರನ್ನು ಹಿಮ್ಮೆಟ್ಟಿಸಬೇಕಾದರೆ, ಬೆಟ್ಟ ಹತ್ತಿಹೋಗಬೇಕಿತ್ತು. ಬೆಟ್ಟದ ಮೇಲಿದ್ದ ಪಾಕ್‌ ಸೈನಿಕರಿಗೆ ಭಾರತದ ಸೈನಿಕರ ಮೇಲೆ ದಾಳಿ ಮಾಡೋದಕ್ಕೆ ಸೂಕ್ತ ಅನುಕೂಲಗಳಿದ್ದರು. ಆದ್ರೆ ಬೆಟ್ಟದ ಕೆಳಭಾಗದಿಂದ ಮೇಲಕ್ಕೆ ಹೋಗುವುದು ಭಾರತದ ಸೈನಿಕರಿಗೆ ದೊಡ್ಡ ಸವಾಲೇ ಆಗಿತ್ತು. ಆದರೂ, ಭಾರತದ ಸೈನಿಕರು ದೃತಿಗೆಡಲಿಲ್ಲ. ಮದ್ದುಗುಂಡುಗಳು, ಗನ್‌ಗಳನ್ನು ಹೊತ್ತುಕೊಂಡೇ ಬೆಟ್ಟಗಳನ್ನು ಹತ್ತಿ ಪಾಕ್‌ ಸೈನಿಕರಿಗೆ ಬಿಸಿ ಮುಟ್ಟಿಸಿದರು. ಇದು ಪ್ರಪಂಚದ ಯುದ್ಧ ಇತಿಹಾಸದಲ್ಲೇ ಇದೊಂದು ಮೈಲುಗಲ್ಲು.  ಪಾಯಿಂಟ್‌ 5353, ಬಟಾಲಿಕ್‌ ಪ್ರದೇಶವನ್ನು ಭಾರತ ವಶಪಡಿಸಿಕೊಳ್ತು. ಟೈಗರ್‌ ಹಿಲ್‌ ಪ್ರದೇಶವನ್ನು ಮತ್ತೆ ಭಾರತ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ನಮಗೆ ಸಿಕ್ಕ ದೊಡ್ಡ ಜಯ.

ಕಾರ್ಗಿಲ್​ ಯುದ್ಧದಲ್ಲಿ ಹೋರಾಡಿದ ಪ್ರಮುಖ ವೀರರಿವರು

==============================
1. ಕ್ಯಾಪ್ಟನ್​ ವಿಕ್ರಮ್​ ಬಾತ್ರಾ, ಪರಮವೀರ​ ಚಕ್ರ

2. ರೈಫಲ್​ಮ್ಯಾನ್​ ಸಂಜಯ್​ ಕುಮಾರ್​, ಪರಮವೀರ​ ಚಕ್ರ

3. ಗ್ರೆನೇಡಿಯರ್​ ಯೋಗೇಂದ್ರ ಸಿಂಗ್​ ಯಾದವ್,  ಪರಮವೀರ​ ಚಕ್ರ

4. ಕ್ಯಾಪ್ಟನ್​ ಮನೋಜ್​ ಕುಮಾರ್​ ಪಾಂಡೆ, ಪರಮವೀರ​ ಚಕ್ರ

5. ಲೆಫ್ಟಿನೆಂಟ್​ ಬಲವಾನ್​ ಸಿಂಗ್, ಮಹಾವೀರ​ ಚಕ್ರ

6. ಮೇಜರ್​ ರಾಜೇಶ್​ ಸಿಂಗ್ ಅಧಿಕಾರಿ, ಮಹಾವೀರ​ ಚಕ್ರ

7. ಮೇಜರ್​ ವಿವೇಕ್ ಗುಪ್ತಾ, ಮಹಾವೀರ​ ಚಕ್ರ

8. ಕ್ಯಾಪ್ಟನ್​ ಎನ್​ ಕೆಂಗುರುಸೆ, ಮಹಾವೀರ​ ಚಕ್ರ

9. ​ಲೆಫ್ಟಿನೆಂಟ್​ ಕಿಷಿಂಗ್​ ಕ್ಲಿಫೋರ್ಡ್​ ನೋನ್​ಗ್ರಾಮ್, ಮಹಾವೀರ​ ಚಕ್ರ

10. ನಾಯಕ್​ ದಿಗೇಂದ್ರ ಕುಮಾರ್, ಮಹಾವೀರ​ ಚಕ್ರ

Share Post