CrimeNational

ಮದುವೆಯಾಗಲು ಟಿವಿ ಆಂಕರ್‌ ಕಿಡ್ನ್ಯಾಪ್‌ ಮಾಡಿದ ಯುವತಿ; ನಂತರ ಕತೆಗೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌!

ಹೈದರಾಬಾದ್‌; ಹೈದರಾಬಾದ್‌ನಲ್ಲಿ ಟಿವಿ ಆ್ಯಂಕರ್‌ ಅಪಹರಣ ಪ್ರಕರಣ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ. ಮ್ಯಾಟ್ರಿಮೋನಿ ಸೈಟ್‌ನಲ್ಲಿ ಟಿವಿ ಆ್ಯಂಕರ್‌ನ ಪ್ರೊಫೈಲ್ ನೋಡಿದ ಯುವತಿಯೊಬ್ಬಳು, ಆತನನ್ನು ಪ್ರೀತಿ ಮಾಡಲು ಶುರು ಮಾಡುತ್ತಾಳೆ. ಹೇಗಾದರೂ ಮಾಡಿ ಆತನನ್ನು ತನ್ನವನನ್ನಾಗಿ ಮಾಡಿಕೊಳ್ಳಬೇಕೆಂದು ಬಯಸುತ್ತಾಳೆ. ಅದಕ್ಕಾಗಿ ಆ್ಯಂಕರ್ ನನ್ನು ಕಿಡ್ನಾಪ್ ಮಾಡಿ ರೂಮಿನಲ್ಲಿ ಕೂಡಿ ಹಾಕಿದ್ದಾಳೆ. ಆದರೆ, ಆ ಯುವಕ ಹೇಗೋ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ಕೊಟ್ಟಿದ್ದಾನೆ.. ಈ ಸ್ಟೋರಿಯಲ್ಲಿ  ಮೈಂಡ್ ಬ್ಲ್ಯಾಕ್ ಟ್ವಿಸ್ಟ್ ಕೂಡಾ ಇದೆ. ಅದೇನು ಅಂತ ನೋಡೋಣ ಬನ್ನಿ…

ಇದನ್ನೂ ಓದಿ; Andhrapradesh; ಮುಸಲ್ಮಾನರು ಆರಾಧಿಸುವ ವೆಂಕಟೇಶ್ವರ; ಯುಗಾದಿಯಂದು ವಿಶೇಷ ವ್ರತಾಚರಣೆ!

ಸ್ಟಾರ್ಟ್‌ಅಪ್‌ ಕಂಪನಿಗಳ ಎಂಡಿ ಈಕೆ;

ಸ್ಟಾರ್ಟ್‌ಅಪ್‌ ಕಂಪನಿಗಳ ಎಂಡಿ ಈಕೆ;  ತ್ರಿಷ್ಣಾ ಎಂಬ ಯುವತಿ ಹೈದರಾಬಾದ್‌ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮಾಡುತ್ತಾಳೆ. ಜೊತೆಗೆ ಹಲವು ಸ್ಟಾರ್ಟ್ ಅಪ್ ಕಂಪನಿಗಳ ಎಂಡಿ ಕೂಡಾ ಹೌದು. ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವ ತ್ರಿಷ್ಣಾ, ಭಾರತ್ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಹುಡುಗನನ್ನು ಹುಡುಕುತ್ತಿದ್ದಳು. ಈ ವೇಳೆ ಟಿವಿ ಚಾನೆಲ್‌ನಲ್ಲಿ ಆ್ಯಂಕರ್ ಆಗಿರುವ ಪ್ರಣವ್ ಹೆಸರಿನ ಪ್ರೊಫೈಲ್ ಅನ್ನು ಈಕೆ ನೋಡಿ ಮೆಚ್ಚಿಕೊಂಡಿದ್ದಾಳೆ. ಆ ಪ್ರೊಫೈಲಲ್‌ ನೋಡುತ್ತಲೇ ಆಕೆಗೆ ಪ್ರಣವ್ ಮೇಲೆ ಪ್ರೀತಿ ಚಿಗುರಿದೆ. ಹೇಗಾದರೂ ಮಾಡಿ ಆತನನ್ನೇ ಮದುವೆಯಾಗಲು ನಿರ್ಧರಿಸಿದ್ದಾಳೆ. ಹೀಗಾಗಿ ಆ ಐಡಿಯಲ್ಲಿದ್ದ ನಂಬರ್ ಗಳ ಮೂಲಕ, ಪ್ರಣವ್‌ ನನ್ನು ಸಂಪರ್ಕ ಮಾಡಿದ್ದಾಳೆ. ಒಂದಷ್ಟು ದಿನ ಇಬ್ಬರ ನಡುವೆ ಚಾಟಿಂಗ್‌ ಕೂಡಾ ನಡೆದಿದೆ. ಆದ್ರೆ ಕೆಲ ದಿನಗಳ ನಂತರ ಇದ್ದಕ್ಕಿದ್ದಂತೆ ಪ್ರಣವ್‌ ಸಂಪರ್ಕ ಸಿಗದಂತಾಗಿದೆ.

ಇದನ್ನೂ ಓದಿ; ಎಂಜಿಯರಿಂಗ್, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಪ್ರಣವ್‌ನ ಕಿಡ್ನ್ಯಾಪ್‌ ಮಾಡಿಸಿದ ತ್ರಿಷ್ಣಾ;

ಪ್ರಣವ್‌ನ ಕಿಡ್ನ್ಯಾಪ್‌ ಮಾಡಿಸಿದ ತ್ರಿಷ್ಣಾ; ಯಾವಾಗ ಪ್ರಣವ್‌ ಸಂಪರ್ಕಕಕ್ಕೆ ಸಿಗದಂತಾದನೋ ಆಗ ತ್ರಿಷ್ಣಾ ಆತ ನನಗೆ ಮೋಸ ಮಾಡಿದ್ದಾನೆ ಎಂದುಕೊಳ್ಳುತ್ತಾಳೆ. ಹೇಗಾದರೂ ಮಾಡಿ ಪ್ರಣವ್‌ನನ್ನು ಧಕ್ಕಿಸಿಕೊಳ್ಳಬೇಕು ಎಂದು ಬಯಸುತ್ತಾಳೆ. ಆಗ ಆಕೆಯ ಬಂದ ಐಡಿಯಾನೇ ಕಿಡ್ನ್ಯಾಪ್‌… ತನ್ನ ಪ್ರಭಾವ ಬಳಸಿ, ಒಂದು ಪ್ರಣವ್‌ನನ್ನು ಕಿಡ್ನ್ಯಾಪ್‌ ಮಾಡಿಕೊಂಡು ಬರುತ್ತಾಳೆ. ಆತನನ್ನು ಒಂದು ಕೊಠಡಿಯಲ್ಲಿ ಕೂಡಿಹಾಕುತ್ತಾಳೆ.. ಫೆಬ್ರವರಿ 11ರಂದು ಪ್ರಣವ್‌ ಕಿಡ್ನ್ಯಾಪ್‌ ಆಗಿದ್ದು, ಆತನ ಪೋಷಕರು ಪ್ರಣವ್‌ ನಾಪತ್ತೆಯಾಗಿದ್ದರ ಬಗ್ಗೆ ದೂರು ಕೂಡಾ ಕೊಟ್ಟಿರುತ್ತಾರೆ. ಹೀಗಿರುವಾಗಲೇ ಪ್ರಣವ್‌ ಅದೇಗೋ ತಪ್ಪಿಸಿಕೊಂಡು ಬಂದು ಪೊಲೀಸರನ್ನು ಭೇಟಿಯಾಗುತ್ತಾನೆ. ಆಗಲೇ ಪ್ರಕರಣಕ್ಕೆ ಟ್ವಿಸ್ಟ್‌ ಸಿಗೋದು.

ಇದನ್ನೂ ಓದಿ;Notice; ರಾಹುಲ್‌, ಸಿದ್ದರಾಮಯ್ಯ, ಡಿಕೆಶಿಗೆ ಸಮನ್ಸ್‌; ಖುದ್ದು ಹಾಜರಿಗೆ ಆದೇಶ!

ಸೈಬರ್‌ ಕ್ರಿಮಿನಲ್‌ಗಳು ಸೃಷ್ಟಿಸಿದ್ದು ಪ್ರಣವ್‌ ಫೇಕ್‌ ಐಡಿ;

ಸೈಬರ್‌ ಕ್ರಿಮಿನಲ್‌ಗಳು ಸೃಷ್ಟಿಸಿದ್ದು ಪ್ರಣವ್‌ ಫೇಕ್‌ ಐಡಿ; ಪ್ರಣವ್‌ ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಪೊಲೀಸರು ಎಚ್ಚೆತ್ತುಕೊಳ್ಳುತ್ತಾರೆ. ಪ್ರಣವ್‌ನನ್ನು ಕಿಡ್ನಾಪ್ ಮಾಡಿದ್ದ ಆರೋಪಿ ತ್ರಿಷ್ಣಾಳನ್ನು ಪೊಲೀಸರು ಹೈದರಾಬಾದ್‌ನ ಉಪ್ಪಳದಲ್ಲಿ ಬಂಧಿಸಿದ್ದಾರೆ. ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಮ್ಯಾಟ್ರಿಮೋನಿಯಲ್ಲಿ ಪ್ರಣವ್ ಫೋಟೋಗಳು ಇಷ್ಟವಾಗಿದ್ದು, ಮದುವೆಯಾಗುವುದಕ್ಕಾಗಿ ಕಿಡ್ನಾಪ್ ಮಾಡಿರುವುದಾಗಿ ತಿಳಿಸಿದ್ದಾಳೆ. ಆದರೆ, ಪೊಲೀಸರ ತನಿಖೆಯಲ್ಲಿ ಮ್ಯಾಟ್ರಿಮೋನಿ ಸೈಟ್‌ನಲ್ಲಿದ್ದ ಐಡಿ ಪ್ರಣವ್ ಅವರದ್ದಲ್ಲ, ಸೈಬರ್ ಕ್ರಿಮಿನಲ್‌ಗಳು ಸೃಷ್ಟಿಸಿದ ನಕಲಿ ಪ್ರೊಫೈಲ್ ಎಂದು ತಿಳಿದುಬಂದಿದೆ. ನಕಲಿ ಪ್ರೊಫೈಲ್‌ ಕ್ರಿಯೇಟ್‌ ಮಾಡಿದ್ದ ಸೈಬರ್‌ ಕಳ್ಳರು, ತ್ರಿಷ್ಣಾ ಅವರಿಂದ ಸುಮಾರು 40 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

 

Share Post