National

ಕಾರ್ಗಿಲ್‌ ವಿಜಯ್‌ ದಿವಸ್‌; ಕಾರ್ಗಿಲ್‌ ಯುದ್ಧದ ಕೆಲ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ

ಇಂದು 24ನೇ ವರ್ಷದ ಕಾರ್ಗಿಲ್‌ ವಿಜಯ್‌ ದಿವಸ್‌ ಆಚರಿಸುತ್ತಿದ್ದೇವೆ. 1999ರಲ್ಲಿ ನಡೆದ ಪಾಕಿಸ್ತಾನದೊಂದಿಗೆ ಕಾಳಗ ಅತ್ಯಂತ ರೋಚಕವಾಗಿತ್ತು. ಭಾರತದ ಸೈನಿಕರ ದಿಟ್ಟತನದಿಂದ ಹೋರಾಡಿ ನಮ್ಮ ತಾಕತ್ತೇನು ಅನ್ನೋದನ್ನ ತೋರಿಸಿದ್ದರು. ಆ ಯುದ್ಧದಲ್ಲಿ 500ಕ್ಕೂ ಹೆಚ್ಚು ಭಾರತೀಯ ಸೈನಿಕರು ವೀರಮರಣವನ್ನಪ್ಪಿದ್ದರು. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್‌ ವಿಜಯ್‌ ದಿವಸ್‌ ಆಚರಿಸುತ್ತೇವೆ. ಈ ದಿನದಂದು ಕಾರ್ಗಿಲ್‌ ಯುದ್ಧದ ಕೆಲವು ಆಸಕ್ತಿಕರ ಘಟನೆಗಳನ್ನು ತಿಳಿಯೋಣ ಬನ್ನಿ.

  1. ಯಾವುದೇ ಯುದ್ಧವನ್ನು ಮೊದಲ ಬಾರಿ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಯಿತು ಎಂದರೆ ಕಾರ್ಗಿಲ್‌ ಯುದ್ಧ ಮಾತ್ರ
  2. ಈ ಯುದ್ಧಕ್ಕೆ ಭಾರತ ಆಪರೇಷನ್‌ ವಿಜಯ್‌ ಎಂಬ ರಹಸ್ಯ ಸಂಕೇತನಾಮ ಇಟ್ಟಿದೆ
  3. ಕಾರ್ಗಿಲ್‌ ಯುದ್ಧ ಎರಡು ತಿಂಗಳ ಕಾಲ ನಡೆಯಿತು
  4. ಈ ಯುದ್ಧದ ವೇಳೆ ಹವಾಮಾನ ಕೂಡಾ ಅನುಕೂಲಕರವಾಗಿರಲಿಲ್ಲ. ಕೊರೆಯುವ ಚಳಿಯಲ್ಲೇ ಭಾರತೀಯ ಸೈನಿಕರು ಯುದ್ಧ ಗೆದ್ದರು
  5. ಪಾಕಿಸ್ತಾನದ ಸೈನಿಕರು ಬೆಟ್ಟಗಳ ಮೇಲಿದ್ದರು. ಬೆಟ್ಟಗಳ ಕೆಳಗಿದ್ದ ಭಾರತದ ಸೈನಿಕರು ಅವರನ್ನು ಹಿಮ್ಮೆಟ್ಟಿಸಿದ್ದೇ ಒಂದು ರೋಚಕ ಘಟನೆ
  6. 18 ಸಾವಿರ ಅಡಿ ಎತ್ತರದ ಬೆಟ್ಟಗಳ ಮೇಲೆ ಹತ್ತಿ ಭಾರತೀಯ ಸೈನಿಕರು ಹೋರಾಡಿ ಪಾಕ್‌ ಸೈನಿಕರಿಗೆ ಪಾಠ ಕಲಿಸಿದರು
  7. ಎರಡು ತಿಂಗಳು ನಡೆದ ಈ ಯುದ್ಧದಲ್ಲಿ ಭಾರತದ 539 ಸೈನಿಕರು ಹುತಾತ್ಮರಾಗಿದ್ದಾರೆ. ಇದರಲ್ಲಿ ಪಾಕಿಸ್ತಾನದ ಸಾವಿರಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ
  8. ಈ ಯುದ್ಧಕ್ಕೆ ಭಾರತ ಭಾರಿ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿತು. ಬೋಫೋರ್ಸ್ FH-77B ಹೊವಿಟ್ಜರ್‌ಗಳು,  500 ಫಿರಂಗಿ ಶೆಲ್‌ಗಳು, ರಾಕೆಟ್‌ಗಳು,  300 ಗಣಿಗಳಿಂದ ಬಾಂಬ್‌ಗಳನ್ನು ಬೀಳಿಸಲಾಯಿತು
  9. ಕಾರ್ಗಿಲ್ ಯುದ್ಧವು ಮೂರು ಭಾಗಗಳಲ್ಲಿ ನಡೆಯಿತು. ಒಂದು ಭಾಗದಲ್ಲಿ ಪಾಕಿಸ್ತಾನ ಸೇನೆ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ವಾಪಸ್ ಪಡೆಯಲು ಭಾರತೀಯ ಸೇನೆ ಯೋಜನೆ ರೂಪಿಸಿತು. ಎರಡನೆಯದು ಪಾಕಿಸ್ತಾನ ಸೇನೆ ಅಡಗಿರುವ ಪ್ರದೇಶಗಳಲ್ಲಿ ಅಡಗಿರುವವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವುದು. ಮತ್ತು ಮೂರನೆಯದಾಗಿ, ಪಾಕಿಸ್ತಾನ ಸೇನೆಯು ಯಾವುದೇ ಭಾರತೀಯ ಆಳ್ವಿಕೆಯ ಪ್ರದೇಶಗಳನ್ನು ಆಕ್ರಮಿಸದಂತೆ ಮತ್ತೊಮ್ಮೆ ಕ್ರಮಗಳನ್ನು ತೆಗೆದುಕೊಳ್ಳುವುದು.

 

Share Post