ಐಸಿಸ್ ಉಗ್ರ ಸಂಘಟನೆ ಜೊತೆ ನಿರಂತರ ಸಂಪರ್ಕ; ವಿದ್ಯಾರ್ಥಿ ಅರೆಸ್ಟ್
ನವದೆಹಲಿ; ಐಸಿಸ್ ಉಗ್ರರ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಉತ್ತರ ಪ್ರದೇಶದ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯನ್ನು ಫೈಜ್ ಅನ್ಸಾರಿ ಅಲಿಯಾಸ್ ಫೈಜ್ ಅಂತ ಗುರುತಿಸಲಾಗಿದೆ. ಎನ್‌ಐಎ ಅಧಿಕಾರಿಗಳು ಈತನ ಮನೆಯಲ್ಲಿ ಶೋಧಿಸಿದ್ದು, ಐಸಿಸ್ ಸಂಪರ್ಕದ ಬಗ್ಗೆ ಸೂಕ್ತ ಪುರಾವೆಗಳಿದ್ದಿದ್ದರಿಂದಾಗಿ ಆತನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಎನ್‌ಐಎ ಅಧಿಕಾರಿಗಳು ಎರಡು ದಿನಗಳ ಹಿಂದೆಯಷ್ಟೇ ಫೈಜ್ ಗೆ ಸೇರಿ ಜಾರ್ಖಂಡ್ ಲೋಹರ್ಡಗಾ ಜಿಲ್ಲೆಯ ಮನೆ ಹಾಗೂ ಉತ್ತರ ಪ್ರದೇಶದ ಅಲಿಗಢದಲ್ಲಿರುವ ಬಾಡಿಗೆ ಕೊಠಡಿಯನ್ನು ಪರಿಶೀಲನೆ ಮಾಡಿದ್ದರು. ಈ ವೇಳೆ ಆತನ ಬಳಿ ಹಲವು ಎಲೆಕ್ಟ್ರಾನಿಕ್ ಉಪಕರಣಗಳು, ಅನುಮಾನಾಸ್ಪದ ವಸ್ತುಗಳು ಹಾಗೂ ಹಲವಾರು ದಾಖಲೆಗಳು ಸಿಕ್ಕಿದ್ದವು.
ವಿದೇಶದಲ್ಲಿರುವ ಐಸಿಸ್ ಉಗ್ರರ ಜೊತೆ ಈತ ಸಂಪರ್ಕದಲ್ಲಿದ್ದ ಐಸಿಸ್ ಚಟುವಟಿಕೆಗಳನ್ನು ಬೆಂಬಲಿಸಲು ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಗ್ರೂಪ್ ಕೂಡಾ ಮಾಡಿದ್ದ ಎನ್ನಲಾಗಿದೆ.