DistrictsPolitics

ಟೀ ಮಾರುವ ಮಹಿಳೆ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

ತುಮಕೂರು; 20 ವರ್ಷದಿಂದ ಟೀ ಮಾರುತ್ತಾ ಜೀವನ ಮಾರುತ್ತಿದ್ದ ಮಹಿಳೆಯೊಬ್ಬರು ಗ್ರಾಮ ಪಂಚಾಯತ್‌ ಅಧ್ಯಕ್ಷೆಯಾಗಿ ಗಮನ ಸೆಳೆದಿದ್ದಾರೆ. ತುಮಕೂರಿನ ಊರ್ಡಿಗೆರೆ ಗ್ರಾಮ ಪಂಚಾಯತ್‌ ಅಧ್ಯಕ್ಷೆಯಾಗಿ ಟೀ ಮಾರುವ ಮಹಿಳೆ ಅನ್ನಪೂರ್ಣಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಅನ್ನಪೂರ್ಣಮ್ಮ ಅವರು ಕಳೆದ 20 ವರ್ಷಗಳಿಂದ ಟೀ ಮಾರುತ್ತಾ ಜೀವನ ನಡೆಸುತ್ತಿದ್ದಾರೆ. ದೇವರಾಯನದುರ್ಗದ ದೇವಸ್ಥಾನದ ಬಳಿ ಇವರು ಒಂದು ಪುಟ್ಟ ಟೀ ಅಂಗಡಿ ನಡೆಸುತ್ತಾರೆ. ಅದೇ ಅವರ ಜೀವನಾಧಾರ. ಅಂದಹಾಗೆ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ಸ್ಥಾನ ಬಂದಿತ್ತು. ಊರ್ಡಿಗೆರೆ ಗ್ರಾಮ ಪಂಚಾಯತ್‌ನಲ್ಲಿ 21 ಸದಸ್ಯಬಲವಿದ್ದು, ಬಿಜೆಪಿ ಬೆಂಬಲಿತ 10 ಮಂದಿ, ಜೆಡಿಎಸ್‌ ಬೆಂಬಲಿತ 11 ಮಂದಿ ಸದಸ್ಯರಿದ್ದಾರೆ. ಅನ್ನಪೂರ್ಣಮ್ಮ ಅವರು ಬಿಜೆಪಿ ಬೆಂಬಲಿತ ಸದಸ್ಯೆಯಾಗಿದ್ದಾರೆ. ಜೆಡಿಎಸ್‌ನಲ್ಲಿ ಮೂವರು ಮುಸ್ಲಿಂ ಮಹಿಳೆಯರಿದ್ದರು. ಅವರಿಂದ ಸ್ಪರ್ಧೆ ಮಾಡಿಸಬಹುದಿತ್ತು. ಆದ್ರೆ ಅನ್ನಪೂರ್ಣಮ್ಮ ಅವರ ಜನಪರ ಕಾಳಜಿ ಹಾಗೂ ಶಾಸಕ ಸುರೇಶ್‌ ಗೌಡರ ತಂತ್ರಗಾರಿಕೆಯಿಂದಾಗಿ ಜೆಡಿಎಸ್‌ನಿಂದ ಯಾರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಎಲ್ಲರ ಬೆಂಬಲದೊಂದಿಗೆ ಅನ್ನಪೂರ್ಣಮ್ಮ ಅವರು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

 

Share Post