ವಿಧಾನಸೌಧ ಪ್ರವೇಶಕ್ಕೆ ನಕಲಿ ಪಾಸ್ ಬಳಕೆ; 300 ನಕಲಿ ಪಾಸ್ ವಶ
ಬೆಂಗಳೂರು; ವಿಧಾನಸಭೆ ಕಲಾಪಕ್ಕೆ ಖಾಸಗಿ ವ್ಯಕ್ತಿ ಪ್ರವೇಶ ಮಾಡಿದ ಪ್ರಕರಣ ನಡೆದ ನಂತರ ವಿಧಾನಸೌಧ ಭದ್ರತೆ ಒದಗಿಸುತ್ತಿರುವ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ವಿಧಾನಸೌಧ ಪ್ರವೇಶಿಸುವ ಪ್ರತಿಯೊಬ್ಬರನ್ನೂ ಪರಿಶೀಲಿಸಿಯೇ ಹೊರಬಿಡಲಾಗುತ್ತಿದೆ. ಈ ವೇಳೆ ನಕಲಿ ಪಾಸ್ಗಳನ್ನು ಬಳಸಿ ವಿಧಾನಸೌಧ ಪ್ರವೇಶ ಮಾಡುತ್ತಿದ್ದ ಹಲವು ಸಿಕ್ಕಿಬಿದ್ದಿದ್ದಾರೆ. ಕಳೆದ ನಾಲ್ಕೈ ದಿನಗಳಲ್ಲಿ 300 ನಕಲಿ ಪಾಸ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಸಿಬಿ ಮುಖ್ಯಸ್ಥರಾಗಿದ್ದ ಡಾ.ಶರಣಪ್ಪ ವಿಧಾನಸೌಧದ ಭದ್ರತೆ ನೇತೃತ್ವ ವಹಿಸಿದ್ದು, ಎಲ್ಲಾ ಗೇಟ್ಗಳಲ್ಲೂ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಹಲವಾರು ಮಂದಿ ಬೇರೆಯವರ ಪಾಸ್ಗಳನ್ನು ಕಲರ್ ಜೆರಾಕ್ಸ್ ಮಾಡಿಸಿಕೊಂಡು ಓಡಾಡುತ್ತಿದ್ದರು. ಇನ್ನು ಕೆಲವರು ಹಳೇ ಪಾಸ್ಗಳನ್ನು ದಿನಾಂಕ ತಿದ್ದಿಕೊಂಡು ಓಡಾಡುತ್ತಿದ್ದರು. ಇನ್ನು ಕೆಲ ವಾಹನಗಳಿಗೆ ನಕಲಿ ಪಾಸ್ಗಳನ್ನು ಬಳಸಿರೋದು ಕಂಡುಬಂದಿದೆ.
ಎಂಎಲ್ಎ, ಎಂಎಲ್ಸಿಗಳಿಗೆ ನೀಡಿರುವ ಪಾಸ್ಗಳನ್ನು ನಕಲಿ ಮಾಡಿಕೊಂಡು ಬಳಸುತ್ತಿರುವವರೇ ಹೆಚ್ಚಿದ್ದಾರೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಸದ್ಯ ಇಂತಹ ಪಾಸ್ಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ಇಂತಹ ಪಾಸ್ ಬಳಸುತ್ತಿರುವವರ ಮಾಹಿತಿಯನ್ನು ಸಂಗ್ರಹಿಸಲಾಗಿದೆ.